ನವದೆಹಲಿ: 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಬಂದಿವೆ.
ಕನ್ನಡದ ರಿಸರ್ವೇಷನ್ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ. ಟಿಎಸ್ ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರದ ಸಂಗೀತಕ್ಕಾಗಿ ಬಾಪು ಪದ್ಮನಾಭ ಅತ್ಯುತ್ತಮ ಸಂಗೀತ ಮತ್ತು ಮೇಕಪ್ ವಿಭಾಗದಲ್ಲಿ ಎನ್ ಕೆ ರಾಮಕೃಷ್ಣ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ರೈಲ್ವೆ ಚಿಲ್ಡ್ರನ್ ಚಿತ್ರದ ಅಭಿನಯಕ್ಕಾಗಿ ಮನೋಹರ್ ಕೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದಿದ್ದಾರೆ.