ಮುಂಬಯಿ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ರೂಪದರ್ಶಿ ಪ್ರಿಯಾ ಸಚ್ದೇವ್ ಅವರನ್ನು ವಿವಾಹವಾಗಿದ್ದಾರೆ.
ಸಂಜಯ್ ಕಪೂರ್ ಮತ್ತು ಪ್ರಿಯಾ ಸಚ್ದೇವ್ ಆಪ್ತರೊಬ್ಬರು ಮದುವೆ ವಿಷಯವನ್ನು ಖಚಿತ ಪಡಿಸಿದ್ದು, ನ್ಯೂಯಾರ್ಕ್ ನಲ್ಲಿ ನಡೆಯುವ ಸಮಾರಂಭದಲ್ಲಿ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ, ಪ್ರಿಯಾ ಸಂಜಯ್ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.
ಇಬ್ಬರು ಯಾವ ರೀತಿಯ ಸಂಪ್ರದಾಯದಲ್ಲಿ ವಿವಾಹ ನೇರವೇರುತ್ತದೆ ಎಂಬ ಬಗ್ಗೆ ತಿಳಿದು ಬಂದಿಲ್ಲ.ಈಗಾಗಲೇ ಈ ಜೋಡಿ ರಿಜಿಸ್ಟ್ರಾರ್ ಮದುವೆಯಾಗಿದ್ದು, ಕುಟುಂಬಸ್ಥರಿಗೋಸ್ಕರ ಸಮಾರಂಭ ಆಯೋಜಿಸಲಾಗಿದೆ. ಕಳೆದ ಐದು ವರ್ಷಗಳಿಂದಲೂ ಇಬ್ಬರು ಡೇಟಿಂಗ್ ನಡೆಸುತ್ತಿದ್ದರು.
ಪ್ರಿಯಾ ಸಚ್ದೇವ್ ಈ ಹಿಂದೆ ವಿಕ್ರಮ್ ಚೌತ್ವಾಲ್ ಎಂಬುವವರನ್ನು ವಿವಾಹವಾಗಿ ವಿಚ್ಛೇದನ ನೀಡಿದ್ದಾರೆ, ಸಂಜಯ್ ಕಪೂರ್ ಗೆ ಇದು 3ನೇ ವಿವಾಹವಾಗಿದೆ.