'ಟಗರು' ಸಿನೆಮಾಗಾಗಿ ಟ್ರಕ್ ಓಡಿಸಿದ ಶಿವಣ್ಣ
ಸಿನಿಮಾ ಸುದ್ದಿ
'ಟಗರು' ಸಿನೆಮಾಗಾಗಿ ಟ್ರಕ್ ಓಡಿಸಿದ ಶಿವಣ್ಣ
ಸೂರಿ ನಿರ್ದೇಶನದ 'ಟಗರು' ಸಿನೆಮಾ, ನಟ ಶಿವಾರಾಜ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ. ಈ ಸಿನೆಮಾದಲ್ಲಿ ನಟ ಧನಂಜಯ್, ವಸಿಷ್ಠ ಸಿಂಹ, ಭಾವನಾ ಮತ್ತು ಮಾನ್ವಿತಾ ಹರೀಶ್ ಸೇರಿದಂತೆ ದೊಡ್ಡ
ಬೆಂಗಳೂರು: ಸೂರಿ ನಿರ್ದೇಶನದ 'ಟಗರು' ಸಿನೆಮಾ, ನಟ ಶಿವಾರಾಜ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ. ಈ ಸಿನೆಮಾದಲ್ಲಿ ನಟ ಧನಂಜಯ್, ವಸಿಷ್ಠ ಸಿಂಹ, ಭಾವನಾ ಮತ್ತು ಮಾನ್ವಿತಾ ಹರೀಶ್ ಸೇರಿದಂತೆ ದೊಡ್ಡ ತಾರಾಬಳಗವೇ ಸೇರಿದೆ. ಅತ್ಯುತ್ತಮ ಆಕ್ಷನ್ ದೃಶ್ಯಗಳು, ನೈಜ ಪರಿಸರದಲ್ಲಿ ಚಿತ್ರೀಕರಣಕ್ಕೆ ಹೆಸರಾದ ಸೂರಿ, ಈ ಚಿತ್ರದಲ್ಲಿಯೂ ಹಲವು ಕುತೂಹಲಗಳನ್ನು ಉಳಿಸಿಕೊಂಡಿದ್ದಾರೆ.
'ಟಗರು' ಸಿನೆಮಾದ ಕ್ಲೈಮ್ಯಾಕ್ಸ್ ಪೂರ್ವ ದೃಶ್ಯದ ಚಿತ್ರೀಕರಣದಲ್ಲಿ ವಿನೂತನ ಆಕ್ಷನ್ ದೃಶ್ಯಗಳನ್ನು ಸ್ಟಂಟ್ ಮಾಸ್ಟರ್ ಜಾಲಿ ಬ್ಯಾಸ್ಟಿನ್ ನಿರ್ದೇಶಿಸಿದ್ದಾರೆ. ಈ ಒಂದು ನಿರ್ಧಿಷ್ಟ ದೃಶ್ಯವನ್ನು ಚಿತ್ರೀಕರಿಸುವುದಕ್ಕಾಗಿಯೇ ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರಿಗೆ ೮೦ ಲಕ್ಷ ವೆಚ್ಚ ತಗುಲಿದೆಯಂತೆ. ಇದಕ್ಕಾಗಿ ೫೦೦ ಸದಸ್ಯರ ಚಿತ್ರತಾಣದ ಅವಿರತವಾಗಿ ಹಗಲು ರಾತ್ರಿ ಶ್ರಮಿಸುತ್ತಿದೆಯಂತೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಲೀಜಾ ಜೋಸ್ ಫೆಲಿಸರಿ ನಿರ್ದೇಶನದ 'ಅಂಗಾಮಲೈ ಡೈರೀಸ್' ಸಿನೆಮಾದ ಸ್ಟಂಟ್ ನಿರ್ದೇಶನಕ್ಕೆ ಜಾಲಿ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿತ್ತು.
ಈಗ ಈ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಸೂರಿ "ಇದು ಜಾತ್ರೆಯ ಸೆಟ್. ಆರೂವರೆ ಎಕರೆ ಜಾಗದಲ್ಲಿ ಇದನ್ನು ನಿರ್ಮಿಸಲಾಗಿದ್ದು, ನಾಯಕ ನಟ ಶಿವರಾಜ್ ಕುಮಾರ್ ಮತ್ತು ಖಳನಟ ಧನಂಜಯ್ ಮತ್ತು ಇತರ ೫೦ ಫೈಟರ್ಸ್ ಜೊತೆಗೆ ಇದು ನಡೆಯುತ್ತದೆ. ಇದಕ್ಕಾಗಿ ದೊಡ್ಡ ಟ್ರಕ್ ಒಂದನ್ನು ಶಿವಣ್ಣ ಓಡಿಸಿದ್ದಾರೆ" ಎನ್ನುತ್ತಾರೆ ಸೂರಿ.
"ನನಗೆ ಶಿವಣ್ಣ ಅವರ ಚಾಲನೆಯ ಅನುಭವದ ಬಗ್ಗೆ ಕುತೂಹಲ ಇತ್ತು ಮತ್ತು ಭಾರತದಲ್ಲಿ ಮಾರುತಿ ಕಾರು ಬಿಡುಗಡೆಯಾದಾಗ ಅದನ್ನು ಓಡಿಸಿದ ಮೊದಲ ಕೆಲವರಲ್ಲಿ ಅವರು ಒಬ್ಬರು ಎಂದು ತಿಳಿದುಬಂತು. ಅಂದಿನಿಂದ ಅವರು ಎಲ್ಲ ರೀತಿಯ ಚಾಲನೆಯನ್ನು ಸಂತಸಪಟ್ಟಿದ್ದಾರೆ" ಎನ್ನುತ್ತಾರೆ ಸೂರಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ