ಇಂದಿನ ದಿನಗಳಲ್ಲಿ ದೇಶಭಕ್ತಿಯ ಉತ್ಸಾಹ ಬರೀ ಸಾಮಾಜಿಕ ಮಾಧ್ಯಮಗಳಲ್ಲಿ: ಪ್ರಣೀತಾ ಸುಭಾಷ್

ನಾನು ಉತ್ತಮ ಗುಣಮಟ್ಟದ ಸಿನಿಮಾಗಳಿಗೆ ಆದ್ಯತೆ ನೀಡುತ್ತೇನೆಯೇ ಹೊರತು ಸಿನಿಮಾ ಸಂಖ್ಯೆಗಳಿಗಲ್ಲ ಎಂದು ನಟಿ ಪ್ರಣೀತಾ ಸುಭಾಷ್ ...
ಪ್ರಣೀತಾ
ಪ್ರಣೀತಾ
Updated on
ಬೆಂಗಳೂರು: ನಾನು ಉತ್ತಮ ಗುಣಮಟ್ಟದ ಸಿನಿಮಾಗಳಿಗೆ ಆದ್ಯತೆ ನೀಡುತ್ತೇನೆಯೇ ಹೊರತು ಸಿನಿಮಾ ಸಂಖ್ಯೆಗಳಿಗಲ್ಲ ಎಂದು ನಟಿ ಪ್ರಣೀತಾ ಸುಭಾಷ್ ಹೇಳಿದ್ದಾರೆ.
ಸದ್ಯ ಶಿವರಾಜಾ ಕುಮಾರ್ ಅಭಿನಯದ ಮಾಸ್ ಲೀಡರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕ್ರೆಡಿಟ್ ನಟರಾದ ವಿಜಯ್ ರಾಘವೇಂದ್ರ, ಯೋಗಿ, ಗುರುರಾಜ್ ಜಗ್ಗೇಶ್ ಮತ್ತು ಶರ್ಮಿಳಾ ಮಾಂಡ್ರೆ ಹಾಗೂ ವಂಶಿ ಕೃಷ್ಣ ಅವರಿಗೆ ಸಲ್ಲಿಸಿದ್ದಾರೆ. 
ಮಾಸ್ ಲೀಡರ್ ಸಿನಿಮಾದಲ್ಲಿ ನನ್ನ ಪಾತ್ರ ಸೇರಿ ಪ್ರತಿಯೊಂದು ಪಾತ್ರಕ್ಕೂ ಹೆಚ್ಚಿನ ಮಹತ್ವವಿದೆ. ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರ ಜೊತೆ ಪ್ರೀತಿ, ಪ್ರೇಮ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಸ್ ಲೀಡರ್ ಸಿನಿಮಾ ಸೇನಾಧಿಕಾರಿಯ ಕಥೆಯದ್ದಾಗಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣ ರಾಜ್ಯೋತ್ಸವಗಳ ಆಚರಣೆ ಕೂಡ ಸಿನಿಮಾದಲ್ಲಿ ನಡೆಯಲಿದೆ. ಇಂದಿನ ದಿನಗಳಲ್ಲಿ ಜನರು ದೇಶಭಕ್ತಿಯನ್ನು ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ತೋರಿಸುತ್ತಾರೆ.
ಆನ್ ಲೈನ್ ನಲ್ಲಿ ಜಗಳ, ಆಕ್ಷೇಪಾರ್ಹ ಕಾಮೆಂಟ್ಸ್ ಹಾಕುವುದು, ಇದಿ ಕೇವಲ ಸುದ್ದಿ ಸೃಷ್ಟಿಸುತ್ತದೆಯೇ ಹೊರತು, ಸಮಸ್ಯೆಗೆ ಪರಿಹಾರ ತಿಳಿಸುವುದಿಲ್ಲ ಎಂದು ಪ್ರಣೀತಾ ಹೇಳಿದ್ದಾರೆ. ದೇಶದ ಗಡಿಯಲ್ಲಿ ಹೋರಾಡುವ ಸೈನಿಕರ ಬಗ್ಗೆ ಹೆಚ್ಚಿನ ಗಮನ ನೀಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ತಾವು ನಟಿಸಿರುವ ಮಾಸ್ ಲೀಡರ್ ಸಿನಿಮಾದಲ್ಲಿ  ಸೇನೆಯ ಬಗ್ಗೆ ಹೆಚ್ಚು ಫೋಕಸ್ ಮಾಡಲಾಗಿದ್ದು ಕಮರ್ಷಿಯಲ್ ಎಂಟರ್ಟೈನ್ ಮೆಂಟ್ ಸಿನಿಮಾವಾಗಿದೆ. ತರುಣ್ ಶಿವಪ್ಪ ನಿರ್ಮಾಣದ ಸಿನಿಮಾದಲ್ಲಿ ಆಶಿಕಾ ರಂಗನಾಥ್,  ಶರ್ಮಿಳಾ ಮಾಂಡ್ರೆ, ಸೇರಿದಂತೆ ಹಲವರು ನಟಿಸಿದ್ದಾರೆ. ತಮ್ಮ ವೃತ್ತಿ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಿರುವ ಪ್ರಣೀತಾ ಚಿತ್ರಗಳ ಸಂಖ್ಯೆಗೆ ಮಹತ್ವ ನೀಡುವುದಿಲ್ಲವಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com