ಯೋಗಾನಂದ್ ಚೊಚ್ಚಲ ನಿರ್ದೇಶನದಲ್ಲಿ ಶರಣ್ ಗೆ ರಾಗಿಣಿ ನಾಯಕಿ

ಸಂಭಾಷಣೆ ಬರಹಗಾರ ಯೋಗಾನಂದ್ ಮುದ್ದಣ ನಿರ್ದೇಶಕರಾಗುತ್ತಿದ್ದು ನಾಯಕ ನಟ ಶರಣ್ ಗೆ ನಿರ್ದೇಶನ...
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
Updated on: 
ಬೆಂಗಳೂರು: ಸಂಭಾಷಣೆ ಬರಹಗಾರ ಯೋಗಾನಂದ್ ಮುದ್ದಣ ನಿರ್ದೇಶಕರಾಗುತ್ತಿದ್ದು ನಾಯಕ ನಟ ಶರಣ್ ಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಚಿತ್ರದ ಕೆಲಸ ಸದ್ದಿಲ್ಲದೆ ನಡೆಯುತ್ತಿದ್ದು ಮೊದಲ ಭಾಗದ ಶೂಟಿಂಗ್ ಕನಕಪುರದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇನ್ನೂ ಹೆಸರಿಡದ ಚಿತ್ರಕ್ಕೆ ಶರಣ್ ಗೆ ನಾಯಕಿಯಾಗಿ ಇದೇ ಮೊದಲ ಬಾರಿಗೆ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಳೆದ ವಾರ ಚಿತ್ರದ ಮುಹೂರ್ತ ನಡೆಯಿತು. ಸದ್ಯಕ್ಕೆ ಚಿತ್ರದ ಬಗ್ಗೆ ನಿರ್ದೇಶಕರು ಹೆಚ್ಚಿನ ಮಾಹಿತಿ ನೀಡಿಲ್ಲ. ಫೋಟೋಶೂಟ್ ಸದ್ಯದಲ್ಲೇ ನಡೆಯಲಿದ್ದು ನಂತರ ಅಧಿಕೃತ ಘೋಷಣೆಯಾಗಲಿದೆ.
ಚಿಂಗಾರಿ, ಮುಕುಂದ ಮುರಾರಿ, ಭಜರಂಗಿ, ವಜ್ರಕಾಯ ಮೊದಲಾದ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಯುಎಸ್ಎಯಲ್ಲಿ ನಡೆಯಲಿದೆಯಂತೆ. ಇದಕ್ಕಾಗಿ ಚಿತ್ರತಂಡ ದೀರ್ಘಕಾಲದ ಯೋಜನೆ ಹಾಕಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com