ಮೀಸೆ ತೆಗೆಯಲು ಅಡ್ಡಿಯಿಲ್ಲ, ಎದೆಯ ಮೇಲಿನ ಕೂದಲು ಕಳೆದುಕೊಳ್ಳಲು ನೋವಿದೆ: ರವಿಚಂದ್ರನ್

ನೂರು ಸಿನಿಮಾಗಳ ನಂತರ ಕ್ರೇಜಿ ಸ್ಚಾರ್ ರವಿಚಂದ್ರನ್ ಮೊದಲ ಬಾರಿಗೆ ದರ್ಶನ್ ಅಭಿನಯದ ಪೌರಾಣಿಕ ಕುರುಕ್ಷೇತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. .,..
ರವಿಚಂದ್ರನ್
ರವಿಚಂದ್ರನ್
ಬೆಂಗಳೂರು: ನೂರು ಸಿನಿಮಾಗಳ ನಂತರ ಕ್ರೇಜಿ ಸ್ಚಾರ್ ರವಿಚಂದ್ರನ್ ಮೊದಲ ಬಾರಿಗೆ ದರ್ಶನ್ ಅಭಿನಯದ ಪೌರಾಣಿಕ ಕುರುಕ್ಷೇತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಲು ಪೂರ್ಣ ಪ್ರಮಾಣದ ಜವಾಬ್ದಾರಿ ತೆಗೆದುಕೊಂಡಿರುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ.
ಕುರುಕ್ಷೇತ್ರ ಪ್ರಾಜೆಕ್ಟ್ ಗೆ ತಮ್ಮ ಹೆಸರನ್ನು ಸೂಚಿಸಿದ ಮೇಲೆ ಕಳೆದ ಶಿವರಾತ್ರಿಯಿಂದ ಸಂಪೂರ್ಣವಾಗಿ ಮಾಂಸಾಹಾರ ಸೇವನೆ ನಿಲ್ಲಿಸಿದ್ದಾರೆ. ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕಾಫಿಯನ್ನು ತ್ಯಜಿಸಿದ್ದಾರೆ. ಹೈದರಾಬಾದ್ ನಲ್ಲಿ ಆಗಸ್ಟ್ 28 ರಿಂದ ಕುರುಕ್ಷೇತ್ರ ಸಿನಿಮಾ ಶೂಟಿಂಗ್ ಗೆ ತೆರಳಲಿರುವ ರವಿಚಂದ್ರನ್ ಅದಕ್ಕಾಗಿ ಅಗತ್ಯವಿರುವ ಎಲ್ಲಾ ಸಿದ್ಧತೆ ನಡೆಸಿದ್ದಾರೆ.
ಕುರುಕ್ಷೇತ್ರ ತಂಡ ಸೇರುವ ಮುನ್ನ ರವಿಚಂದ್ರನ್ ಬಾಕಿ ಉಳಿದಿರುವ ದಶರಥ ಸಿನಿಮಾದ ಟಾಕಿ ಭಾಗವನ್ನು ಪೂರ್ಣಗೊಳಿಸಲಿದ್ದಾರೆ.
ಐತಿಹಾಸಿಕ ಕುರುಕ್ಷೇತ್ರದ ನಂತರ ರಾಜೇಂದ್ರ ಪೊನ್ನಪ್ಪ ಸಿನಿಮಾದ ಶೂಟಿಂಗ್ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಕುರುಕ್ಷೇತ್ರಕ್ಕಾಗಿ ಸಿದ್ಧತೆ ನಡೆಸುತ್ತಿರುವ ರವಿಚಂದ್ರನ್ ಹೆಚ್ಚೇನು ವರ್ಕೌಟ್ ಮಾಡುತ್ತಿಲ್ಲ, ನನ್ನ ಮೀಸೆಯನ್ನು ತೆಗೆಯಲು ನಾನು ತಯಾರಿದ್ದೇನೆ, ಆದರೆ ಎದೆಯ ಮೇಲಿನ ಕೂದಲು ತೆಗೆಯುವುದು ನನಗೆ ಬೇಸರದ ಸಂಗತಿ. ಆದರೆ ಪಾತ್ರಕ್ಕೆ ಇದರ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಇತರ ಪೌರಾಣಿಕ ಸಿನಿಮಾಗಳಲ್ಲಿ ಏಕೆ ನೀವು ಪಾತ್ರ ಮಾಡಬಾರದು ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಾರೆ, ಆದರೆ ಪಾತ್ರಕ್ಕಾಗಿ ಬೇಕಿರುವ  ದೈಹಿಕ ದೃಢತೆಯಿಂದ ಪಾತ್ರಕ್ಕೆ ನ್ಯಾಯ ಒದಗಿಸಬೇಕಾಗುತ್ತದೆ. ನಾನು ನೈಸರ್ಗಿಕವಾಗಿಯೇ ದೇಹದ ತೂಕ ಇಳಿಸಿಕೊಳ್ಳುತ್ತಿದ್ದೇನೆ, ಈಗಾಗಲೇ ಸುಮಾರು 8 ಕೆಜಿ ತೂಕ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ,
ಕುರುಕ್ಷೇತ್ರ ಸಿನಿಮಾದ ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ಹೆಸರು ಸೂಚಿಸಿದಾಗ ಹಲವು ಮಂದಿಗೆ ಆಶ್ಚರ್ಯವಾಗಿತ್ತು. ನನಗೂ ಕೂಡ ಕೃಷ್ಣನ ಪಾತ್ರದ ಬಗ್ಗೆ ಅರಿವಿತ್ತು. ಹೊಟ್ಟೆ ಬೆಳೆಸಿಕೊಂಡಿರುವ ನಾನು ಹೇಗೆ ಕೃಷ್ಣನ ಪಾತ್ರ ನಿರ್ವಹಿಸುತ್ತೇನೆ ಎಂಬ ಬಗ್ಗೆ ಎಲ್ಲರಿಗೂ ಆತಂಕ ಎದುರಾಗಿತ್ತು. ಪ್ರಸಕ್ತವಾಗಿ ಇರುವ ಹಲವು ಹಿರಿಯ ನಟರಿಗಿಂತ ನಾನು ಕೃಷ್ಣನ ಪಾತ್ರವನ್ನ ನಿರ್ವಹಿಸುತ್ತೇನೆ ಎಂದು ರವಿಚಂದ್ರನ್ ಭರವಸೆ ವ್ಯಕ್ತ ಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com