ಏಕತಾನತೆಯ ಪಾತ್ರಗಳಿಗೆ ರಚಿತಾ ರಾಮ್ ಬ್ರೇಕ್: ಬ್ರಿಟಿಷರ ಕಾಲದ ಸಿನಿಮಾದಲ್ಲಿ ನಟನೆ

ವಿವಾಹ ಸಂಭ್ರಮದಲ್ಲಿದ್ದ ನಿರ್ದೇಶಕ ಪಿ.ಸಿ ಶೇಖರ್ ರಜೆ ಮುಗಿಸಿ ಮರಳಿದ್ದಾರೆ. ಬ್ರಿಟಿಷರ ಕಾಲದ ಭಾರತ ಕಥೆಯ ಸಿನಿಮಗಾಗಿ ಪ್ರೀ ಪ್ರೊಡಕ್ಷನ್ ಕೆಲಸ ...
ರಚಿತಾ ರಾಮ್
ರಚಿತಾ ರಾಮ್
ಬೆಂಗಳೂರು: ವಿವಾಹ ಸಂಭ್ರಮದಲ್ಲಿದ್ದ  ನಿರ್ದೇಶಕ ಪಿ.ಸಿ ಶೇಖರ್ ರಜೆ ಮುಗಿಸಿ ಮರಳಿದ್ದಾರೆ. ಬ್ರಿಟಿಷರ ಕಾಲದ ಭಾರತ ಕಥೆಯ ಸಿನಿಮಗಾಗಿ ಪ್ರೀ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ. 
ಇದೇ ವೇಳೆ ಸಿನಿಮಾಗಾಗಿ ಕಲಾವಿದರ ಆಯ್ಕೆ ಪೂರ್ಣಗೊಂಡಿದ್ದು ನಟ ಚೇತನ್ ನಾಯಕನಾಗಿ ಹಾಗೂ ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದಾರೆ.
ಈ ಸಿನಿಮಾ ಪಾತ್ರಕ್ಕಾಗಿ ಚೇತನ್ ಹಲವು ದಿನಗಳಿಂದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಕಥೆ ಕೇಳಿ ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. 
ಸದ್ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿರುವ ರಚಿತಾ ಕಮರ್ಷಿಯಲ್ ಸಿನಿಮಾಗಳಿಂದ ಬ್ರೇಕ್ ಬಯಸಿದ್ದರಂತೆ, ಭರ್ಜರಿ ಸಿನಿಮಾ ನಂತರ ಸವಾಲಾತ್ಮಕ ಪಾತ್ರಗಳಲ್ಲಿ ನಟಿಸುವ ಇಚ್ಚೆ ವ್ಯಕ್ತ ಪಡಿಸಿದ್ದರಂತೆ, ಹೀಗಾಗಿ ಶೇಖರ್ ಅವರ ಸಿನಿಮಾಗೆ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲ್ಲವೂ ಅಂದುಕೊಂಡ ಪ್ಲಾನ್ ನಂತೆ ನಡೆದರೇ ಚಿತ್ರತಂಡ ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಪ್ರಕಟಣೆ ನೀಡಲಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನಿರ್ಮಾಪಕರು ಯಾರು ಎಂಬುದನ್ನು ಕೆಲವೇ ದಿನಗಳಲ್ಲಿ ತಿಳಿಸಲಿದ್ದಾರೆ. ಚೇತನ್ ಜೊತೆ ರಚಿತಾ ಅವರ ಮೊದಲ ಸಿನಿಮಾವಾಗಿದೆ. ಭರ್ಜರಿ ಸಿನಿಮಾ ರಿಲೀಸ್ ಗಾಗಿ ರಚಿತಾ ಕಾತುರದಿಂದ ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com