ವಿಲ್ಲನ್ ಪೋಸ್ಟರ್
ಸಿನಿಮಾ ಸುದ್ದಿ
ಲಡಾಕ್ ನಿಂದ ವಿಲ್ಲನ್ ಶೂಟಿಂಗ್ ಶಿಫ್ಟ್: ಬ್ಯಾಂಕಾಕ್ ನಲ್ಲಿ ಗಣೇಶ ಹಬ್ಬದ ಆಚರಣೆ
ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಸಿನಿಮಾ ತಂಡ ಗಣೇಶ ಹಬ್ಬವನ್ನು ಬ್ಯಾಂಕಾಂಕ್ ನಲ್ಲೇ ಅಚರಿಸಿಲಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ...
ಬೆಂಗಳೂರು: ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಸಿನಿಮಾ ತಂಡ ಗಣೇಶ ಹಬ್ಬವನ್ನು ಬ್ಯಾಂಕಾಂಕ್ ನಲ್ಲೇ ಅಚರಿಸಿಲಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ಈ ಿನಿಮಾದ ಬಹು ದೊಡ್ಡ ಚೇಸಿಂಗ್ ದೃಶ್ಯವನ್ನು ಬ್ಯಾಂಕಾಕ್ ನಲ್ಲಿ ಆಗಸ್ಟ್ 25 ರಿಂದ ಶೂಟಿಂಗ್ ಮಾಡಲಾಗುವುದು.
ಈ ಮೊದಲು ಈ ದೃಶ್ಯವನ್ನು ಲೇಹ್ ಅಥವಾ ಲಡಾಕ್ ನಲ್ಲಿ ಚಿತ್ರೀಕರಿಸಲು ಯೋಜಿಸಲಾಗಿತ್ತು, ಆದರೆ ಅದಕ್ಕೆ ಅನುಮತಿ ಸಿಗದ ಕಾರಣ ಥಾಯ್ ರಾಜಧಾನಿ ಬ್ಯಾಂಕಾಕ್ ಗೆ ಶೂಟಿಂಗ್ ಶಿಫ್ಟ್ ಆಗಿದೆ.
ಥಾಯ್ಲಾಂಡ್ ನ ಸ್ಟಂಟ್ ಗ್ರೂಪ್ ಒಂದನ್ನು ಪ್ರೇಮ್ ಸಿನಿಮಾದಲ್ಲಿ ಕರೆ ತಂದಿದ್ದಾರೆ, ಕೆಲವೊಂದು ನಿರ್ದಿಷ್ಟ ಸನ್ನಿವೇಶಗಳ ಕೊರಿಯೊಗ್ರಫಿ ಕೂಡ ನಡೆಯಲಿದೆ, ಈಗಾಗಲೇ ವಿಲ್ಲನ್ ಸಿನಿಮಾದ ಸ್ಯಾಟ್ ಲೈಟ್ ಹಕ್ಕು ಭಾರೀ ಬೆಲೆಗೆ ಮಾರಾಟವಾಗಿ ಸುದ್ದಿ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ