ಮೈಸೂರು ಡೈರೀಸ್ ಚಿತ್ರಕ್ಕೆ ಕಿರಿಕ್ ಹುಡುಗನ ಆಕ್ಷನ್ ಕಟ್

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಚಿತ್ರ ಕಿರಿಕ್ ಪಾರ್ಟಿಯಲ್ಲಿ ಅಭಿನಯಿಸಿ, ಚಿತ್ರಕ್ಕೆ ಸಂಭಾಷಣೆ ಮತ್ತು 'ಬೆಳಗೆದ್ದು ಯಾರಾ ಮುಖವ ನಾನು ನೋಡಿದೆ' ಎಂಬ ಹಾಡು ಬರೆದಿದ್ದ ಧನಂಜಯ್...
ಧನಂಜಯ್ ರಂಜನ್
ಧನಂಜಯ್ ರಂಜನ್
ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಚಿತ್ರ ಕಿರಿಕ್ ಪಾರ್ಟಿಯಲ್ಲಿ ಅಭಿನಯಿಸಿ, ಚಿತ್ರಕ್ಕೆ ಸಂಭಾಷಣೆ ಮತ್ತು 'ಬೆಳಗೆದ್ದು ಯಾರಾ ಮುಖವ ನಾನು ನೋಡಿದೆ' ಎಂಬ ಹಾಡು ಬರೆದಿದ್ದ ಧನಂಜಯ್ ರಂಜನ್ ಇದೀಗ ನಿರ್ದೇಶಕನಾಗಲು ಹೊರಟಿದ್ದಾರೆ. 
ಮೈಸೂರು ಡೈರೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಧನಂಜಯ್ ರಂಜನ್ ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ಧನಂಜಯ್ ಹಲವು ಚಿತ್ರಗಳಿಗೆ ಹಾಡು ಬರೆದಿದ್ದು ರಾಮಾ ರಾಮಾ ರೇ ಚಿತ್ರಕಥೆಯಲ್ಲಿ ತಂಡದ ಜತೆ ಸೇರಿ ಕೆಲಸ ಮಾಡಿರುವ ಅನುಭವವಿದೆ. 
ಧನಂಜಯ್ ರಂಜನ್ ಹೇಳುವಂತೆ ಮೈಸೂರು ಡೈರೀಸ್ ಚಿತ್ರ ಇದೊಂದು ಕನಸು, ಕನವರಿಕೆ, ಗೆಳೆತನ ಮಧ್ಯೆ ನಡೆಯುವ ಕಥೆ. ಪ್ರತಿಯೊಬ್ಬರು ಜೀವನದಲ್ಲೂ ಒಂದೊಂದು ಡೈರಿ ಇದ್ದೇ ಇರುತ್ತದೆ. ಆ ಮಧುರ ನೆನಪುಗಳ ನೆನಪಿಸುವಂತಹ ಒಂದು ಸಿನಿಮಾ ಇದಾಗಲಿದೆ ಎಂದರು. 
ಮೈಸೂರು ಡೈರೀಸ್ ಚಿತ್ರಕ್ಕೆ ದೀಪಕ್ ಕೃಷ್ಣ ಬಂಡಾವಳ ಹೂಡುತ್ತಿದ್ದಾರೆ. ಶಕ್ತಿ ಶೇಖರ್ ಛಾಯಾಗ್ರಾಹಣ, ಚರಣ್ ರಾಜ್ ಸಂಗೀತ್ ಚಿತ್ರಕ್ಕಿದೆ. ಸದ್ಯಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದ್ದು ನವೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com