'ಹ್ಯಾಪಿ ಜರ್ನಿ' ಯಲ್ಲಿನ ಟ್ವಿಸ್ಟ್ ಗಳು ನನ್ನ ಗಮನ ಸೆಳೆಯಿತು: ಸೃಜನ್ ಲೋಕೇಶ್

ತಮ್ಮ ಮಾತಿನ ಮೋಡಿಯಿಂದಲೇ ಎಲ್ಲರನ್ನು ಸೆಳೆಯುವ ಸೃಜನ್ ಗೆ ತಮ್ಮ ಮಾತು ಅದ್ಭುತ ಉಡುಗೊರೆಯಾಗಿದೆ. ಟಾಕಿಂಗ್ ಸ್ಟಾರ್ ಎಂದು ಟ್ಯಾಗ್ ನೀಡಲಾಗಿದೆ...
ಸೃಜನ್ ಲೋಕೇಶ್
ಸೃಜನ್ ಲೋಕೇಶ್
Updated on
ಬೆಂಗಳೂರು: ಕಿರುತೆರೆಯ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಸೃಜನ್ ಲೋಕೇಶ್ ಪ್ರಸಿದ್ಧಿ ಪಡೆದಿದ್ದಾರೆ. ಇದು ಸಿನಿಮಾಗಳಿಗೆ ಸೃಜನ್ ಆಯ್ಕೆ ಮಾಡಲು ಸಹಾಯವಾಗಿದ್ದು, ಬೆಳ್ಳಿ ತೆರೆಯ ಪ್ರಯಾಣಕ್ಕೆ ದಾರಿ ಮಾಡಿಕೊಟ್ಟಿದೆ.ಹ್ಯಾಪಿ ಜರ್ನಿ ಸಿನಿಮಾ ಈ ವಾರ ತೆರೆ ಕಾಣಲಿದೆ.
ಸದ್ಯ ಸೃಜನ್ ಹ್ಯಾಪಿ ಜರ್ನಿ ಸಿನಿಮಾ ಪ್ರಮೋಷನ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಯುವಕರನ್ನು ಸೆಳೆಯಲು ಗಮನ ಹರಿಸುತ್ತಿದ್ದಾರೆ,ಜೊತೆಗೆ ಕಾಲೇಜು ಯುವಕರನ್ನು ಸೆಳೆಯುತ್ತಿದ್ದಾರೆ. ಹ್ಯಾಪಿ ಜರ್ನಿ ಸಿನಿಮಾದಲ್ಲಿನ ಟ್ವಿಸ್ಟ್ ಗಳು ನನ್ನ ಗಮನ ಸೆಳೆಯಿತು ಎಂದು ಸೃಜನ್ ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಮಾತಿನ ಮೋಡಿಯಿಂದಲೇ ಎಲ್ಲರನ್ನು ಸೆಳೆಯುವ ಸೃಜನ್ ಗೆ ತಮ್ಮ ಮಾತು ಅದ್ಭುತ ಉಡುಗೊರೆಯಾಗಿದೆ.  ಹೀಗಾಗಿ ಅವರಿಗೆ ಟಾಕಿಂಗ್ ಸ್ಟಾರ್ ಎಂದು ಟ್ಯಾಗ್ ನೀಡಲಾಗಿದೆ, ಅವರ ಪ್ರಕಾರ ಇಂಡಸ್ಟ್ರಿಯಲ್ಲಿ ಯಾರು ಯಾವ ವಿಷಯದಲ್ಲಿ ಹೆಚ್ಚಿನ ಪರಿಣಿತರಾಗಿರುತ್ತಾರೋ ಅವರಿಗೆ ಆ ರೀತಿಯ ಟ್ಯಾಗ್ ನೀಡಲಾಗುತ್ತದೆ.  ಇಂಡಸ್ಟ್ರಿಯಲ್ಲಿ ಬೆಳಕಿಗೆ ಬಾರದ ಹಲವು ಪ್ರತಿಭೆಗಳಿವೆ,ಅದನ್ನು ಗುರುತಿಸುವ ಕೆಲಸವಾಗಬೇಕು ಎಂದು ಹೇಳಿರುವ ಅವರು, ನನಗೆ ವಿಲನ್ ರೋಲ್ ನೀಡಿದರೂ ಅದನ್ನು ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ.
ಹ್ಯಾಪಿ ಜರ್ನಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಲವಾರು ಟ್ವಿಸ್ಟ್ ಗಳಿವೆ. ಜೊತೆಗೆ ತಿರುವುಗಳಿವೆ ಎಚ್ಚರಿಕೆ ಎಂಬ ಆಸಕ್ತಿದಾಯಕ ಟ್ಯಾಗ್ ಲೈನ್ ನೀಡಲಾಗಿದೆ. ಸಿನಿಮಾದಲ್ಲಿ ಯಾವುದೇ ಮಿರ್ಚಿ ಮಸಾಲಾ ಇಲ್ಲ, ಇದು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ವ್ಯಕ್ತ ಪಡಿಸಿದ್ದಾರೆ.
ಸೃಜನ್ ಜೊತೆ ಅಮಿತಾ ಕುಳ್ಳಾಲ ನಾಯಕಿಯಾಗಿ ನಟಿಸಿದ್ದು, ಕುರಿ ಪ್ರತಾಪ್ ಮತ್ತು ನವೀನ್ ಪದಿಲ್ ಪ್ರಧಾನ ಪಾತ್ರಗಳಲ್ಲಿ ಅಭಿನಯಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com