ಜಯಣ್ಣ ಕಂಬೈನ್ಸ್ ಜತೆ ಶ್ರೀಮುರಳಿ ಮುಂದಿನ ಚಿತ್ರ!

ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಮಫ್ತಿ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಮತ್ತೊಂದು ಖುಷಿಯ ವಿಚಾರ ಎದುರಾಗಿದೆ...
ಶ್ರೀಮುರಳಿ
ಶ್ರೀಮುರಳಿ
Updated on
ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಮಫ್ತಿ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಮತ್ತೊಂದು ಖುಷಿಯ ವಿಚಾರ ಎದುರಾಗಿದೆ. ಜಯಣ್ಣ ಕಂಬೈನ್ಸ್ ಜತೆ ಶ್ರೀಮುರಳಿಗೆ ಮತ್ತೊಂದು ಚಿತ್ರದ ಆಫರ್ ಬಂದಿದೆ. 
ಶ್ರೀಮುರಳಿ ಮತ್ತು ಜಯಣ್ಣ ಕಂಬೈನ್ಸ್ ನ ಮುಂದಿನ ಯೋಜನೆ 2018ರಲ್ಲಿ ಆರಂಭಗೊಳ್ಳಲಿದೆ. ಈ ಬಗ್ಗೆ ಮಾತನಾಡಿರುವ ಶ್ರೀಮುರಳಿ, ಜಯಣ್ಣ ಕಂಬೈನ್ಸ್ ನಿರ್ಮಾಣದ ಮಫ್ತಿ ಚಿತ್ರ ದೊಡ್ಡ ಯಶಸ್ಸು ಕಂಡಿದ್ದು ನಮ್ಮ ಜೋಡಿ ಹಿಟ್ ಕಾಂಬಿನೇಷನ್ ಆಗಿದೆ. ಇನ್ನು ನಾನು ಹೊಸ ನಿರ್ದೇಶಕರ ಜತೆ ಕೆಲಸ ಮಾಡಿರುವ ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ಹೀಗಾಗಿ ನನ್ನ ಮುಂದಿನ ಚಿತ್ರ ಯಾವ ಹೊಸ ನಿರ್ದೇಶಕರ ಜತೆಗೆ ಮಾಡುತ್ತೇನೆ ಎಂದು ಗಾಂಧಿನಗರ ಎದುರು ನೋಡುತ್ತಿದೆ. 
ಇನ್ನು ಮಫ್ತಿ ಚಿತ್ರ ಸೂಪರ್ ಹಿಟ್ ಆಗಿದ್ದು ಪ್ರೇಕ್ಷಕರು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ನನ್ನ ಮುಂದಿನ ಚಿತ್ರವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಸದ್ಯ ನನ್ನ ಕೈಯಲ್ಲಿ ಎರಡು ಯೋಜನೆಗಳಿವೆ. ನಿರ್ಧಾರ ತೆಗೆದುಕೊಳ್ಳಲು ನನಗೆ ಸಮಯಬೇಕು ಎಂದು ಹೇಳಿದರು. 
ಮೂಲಗಳ ಪ್ರಕಾರ ಜಯಣ್ಣ ಕಂಬೈನ್ಸ್ ಜತೆ ಚಿತ್ರ ಮಾಡುವುದು ಪಕ್ಕಾ ಆಗಿದೆ. ಇದನ್ನು ನಿರ್ಮಾಪಕರು ಅಧಿಕೃತವಾಗಿ ಘೋಷಿಸಬೇಕಿದೆ ಅಷ್ಟೆ. ಡಿಸೆಂಬರ್ 17ರಂದು ಶ್ರೀಮುರಳಿ ಹುಟ್ಟುಹಬ್ಬವಿರುವುದರಿಂದ ಅಂದೇ ಮುಂದಿನ ಯೋಜನೆ ಘೋಷಣೆಯಾಗಲಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com