ಯೋಗರಾಜ್ ಭಟ್ ಮುಂದಿನ ಚಿತ್ರಕ್ಕೆ ವಿಹಾನ್ ಗೌಡ ನಾಯಕ

ತಮ್ಮ ಹೋಂ ಬ್ಯಾನರ್ ನಡಿ ನಿರ್ದೇಶಕ ಯೋಗರಾಜ್ ಭಟ್ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ಸುದ್ದಿಯಾಗಿತ್ತು....
ವಿಹಾನ್ ಗೌಡ
ವಿಹಾನ್ ಗೌಡ
ತಮ್ಮ ಹೋಂ ಬ್ಯಾನರ್ ನಡಿ ನಿರ್ದೇಶಕ ಯೋಗರಾಜ್ ಭಟ್ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕಾಗಿ ಹೊಸ ಮುಖಗಳನ್ನು ಹುಡುಕುತ್ತಿದ್ದರು. ಇದೀಗ ಜನವರಿ 15ರ ನಂತರ ಚಿತ್ರ ನಿರ್ಮಾಣಕ್ಕೆ ತಂಡ ಕೈ ಹಾಕಲಿದ್ದು ರಂಗಭೂಮಿ ಹಿನ್ನಲೆಯ ನಟ ನಟಿಯರು ಸೇರಿದಂತೆ ಚಿತ್ರಕ್ಕೆ ಕಲಾವಿದರ ಆಯ್ಕೆ ಮಾಡುವ ಅಂತಿಮ ಹಂತದಲ್ಲಿ ಚಿತ್ರತಂಡವಿದೆ.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇನ್ನೂ ಹೆಸರಿಡದ ಶೀರ್ಷಿಕೆಯ ಚಿತ್ರಕ್ಕೆ ನಾಯಕನಾಗಿ ವಿಹಾನ್ ಗೌಡ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿಹಾನ್ ಗೌಡ ಈಗಾಗಲೇ 2 ಚಿತ್ರಗಳಲ್ಲಿ ನಟಿಸಿದ್ದಾರೆ. ದೊಡ್ಡ ಯಶಸ್ಸಿಗಾಗಿ ಕಾಯುತ್ತಿರುವ ವಿಹಾನ್ ಯೋಗರಾಜ್ ಭಟ್ ಅವರನ್ನು ಗುರುಗಳಾಗಿ ಕಾಣುತ್ತಾರೆ. 
ಯೋಗರಾಜ್ ಭಟ್ ಇದೀಗ ಹೊಸ ಪ್ರತಿಭೆಗಳ ಜೊತೆ ಕೆಲಸ ಮಾಡಲು ಇಚ್ಛಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯ ಆಯ್ಕೆ ನಂತರ ಚಿತ್ರತಂಡ ಅಧಿಕೃತ ಘೋಷಣೆ ಮಾಡಲಿದೆ. ಯುವ ಮತ್ತು ಹಳೆ ತಲೆಮಾರಿನ ನಡುವಿನ ಸಂಘರ್ಷದ ಕುರಿತು ಚಿತ್ರ ವಿವರಿಸಲಿದ್ದು ವಿ.ಹರಿಕೃಷ್ಣ ಅವರ ಸಂಗೀತ ಮತ್ತು ಸುಗಾನ್ ಅವರ ಛಾಯಾಗ್ರಹಣವಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com