ಸಂಗೀತ ಸಂಯೋಜಕ ಪಿ. ಕಳಿಂಗರಾವ್ ಜೀವನ ಚರಿತ್ರೆ ಬೆಳ್ಳಿತೆರೆಗೆ

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೊಟ್ಟ ಮೊದಲ ಬಾರಿಗೆ ಜೀವನ ಚರಿತ್ರೆ ಆಧಾರಿತ ಸಿನಿಮಾ..
ಕಳಿಂಗ ರಾವ್
ಕಳಿಂಗ ರಾವ್
Updated on

ಬೆಂಗಳೂರು: ಸದಾ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ ಪ್ರಸಿದ್ಧಿ ಪಡೆದಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೊಟ್ಟ ಮೊದಲ ಬಾರಿಗೆ ಜೀವನ ಚರಿತ್ರೆ ಆಧಾರಿತ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಹಿರಿಯ ಸಂಗೀತ ಸಂಯೋಜಕ ಪಿ. ಕಳಿಂಗರಾವ್ ಅವರ ಜೀವನ ಚರಿತ್ರೆ ಆಧರಿತ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಹಿರಿಯ ಸಂಗೀತ ನಿರ್ದೇಶಕ ಕಳಿಂಗರಾವ್ ಅವರ ಕುರಿತು ಸಿನಿಮಾ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಈ ಪ್ರಾಜೆಕ್ಟ್ ಸದ್ಯ ಪ್ರಾಥಮಿಕ ಹಂತದಲ್ಲಿದೆ.  ನಾನು ಅವರ ಬಗ್ಗೆ ಕೇಳಿದ್ದೆ, ಅವರ ಎಲ್ಲಾ ಹಾಡುಗಳನ್ನು ನಾನು ಕೇಳಿದ್ದೇನೆ, ಆದರೆ ಅವರ ಕುರಿತಾದ ಪುಸ್ತಕ ನನಗೆ ಸಿನಿಮಾ ಮಾಡಲು ಪ್ರೇರಣೆ ನೀಡಿತು, ಪುಸ್ತಕದಲ್ಲಿ ನನಗೆ ಸಂಪೂರ್ಣ ಮಾಹಿತಿಯಿದೆ. ರಾಜೇಂದ್ರ ಸಿಂಗ್ ಬಾಬು ಕಳಿಂಗರಾವ್ ಅವರ ಸಿನಿಮಾ ಮಾಡಲು ಪ್ರಸ್ತಾವನೆ ಮಾಡಿದಾಗ ನನಗೆ ತುಂಬಾ ಸಂತೋಷವಾಯಿತು. ಅವರ ಜೊತೆ ಕೆಲಸ ಮಾಡುವುದು ನನಗೆ ಸಂತಸದ ವಿಷಯವಾಗಿದೆ, ಇದೆಲ್ಲಾ ಕೇವಲ 10 ದಿನಗಳಲ್ಲಿ ಮುಗಿಯಿತು. ಫೆಬ್ರವರಿ 9ರ ನಂತರ ಈ ಸಿನಿಮಾ ಕುರಿತು ಅಧಿಕೃತವಾಗಿ ಪ್ರಕಟಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಸಿನಿಮಾರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಹಂಸಲೇಖಾ ಅವರ ಬಗ್ಗೆ ಪ್ರಶಂಸೆಯ ಮಾತನಾಡಿದ ರಾಕ್ ಲೈನ್ ವೆಂಕಟೇಶ್,ಹಂಸಲೇಖಾ ಕೇವಲ ಸಂಗೀತ ನಿರ್ದೇಶಕ ಮಾತ್ರವಲ್ಲ, ಅವರು ಕಥೆ ಕೂಡ ಬರೆಯುತ್ತಾರೆ, ಕಳಿಂಗರಾವ್ ಅವರ ಪಾತ್ರ ಮಾಡಲು ನಾವು ಕಲಾವಿದರನ್ನು ಹುಡುಕುತ್ತಿದ್ದೇವೆ, ಹೆಸರುವಾಸಿಯಾದ ಇಲ್ಲವೇ ಹೊಸ ಪ್ರತಿಭೆಗಳಿಗಾಗಿ ಶೋಧ ನಡೆಸುತ್ತಿದೇವೆ, ಒಂದು ವಾರದ ನಂತರಪ ಈ ಸಿನಿಮಾ ಸಂಬಂಧ ಸ್ಪಷ್ಟ ಚಿತ್ರಣ ನೀಡುವುದಾಗಿ ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ.

ಕಳಿಂಗರಾವ್ ಅವರ ಸಿನಿಮಾ ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಬರುತ್ತಿರುವ ಮೊಟ್ಟಮೊದಲ ಜೀವನಚರಿತ್ರೆ ಕುರಿತಾದ ಸಿನಿಮಾ ಆಗಿದೆ ಎಂದು ವೆಂಕಟೇಶ್ ಹೇಳಿದ್ದಾರೆ.

ಕಳಿಂಗರಾವ್ ಅವರು ಹಿರಿಯ ಕವಿಗಳಾದ ಕುವೆಂಪು, ಬೇಂದ್ರೆ, ಜಿಪಿ ರಾಜರತ್ನಂ ಸೇರಿದಂತೆ ಹಲವು ಪ್ರಮುಖರ ಪದ್ಯಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರ ಜೀವನದಲ್ಲಿ ಹಲವು ಮಹತ್ವದ ಘಟನೆಗಳು ಜರುಗಿವೆ. ಅವುಗಳನ್ನು ಪುಸ್ತಕದಲ್ಲಿ ಓದಿ ಅದರಿಂದ ಪ್ರೇರೇಪಿತನಾಗಿದ್ದೇನೆ .ನಾನು ಈ ಪುಸ್ತಕವನ್ನು ರಾಕ್ ಲೈನ್ ವೆಂಕಟೇಶ್ ಅವರಿಗೆ ನೀಡಿದ್ದೇನೆ. ಅವರು ಕೂಡ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಕಳಿಂಗರಾವ್ ಸಂಯೋಜಿಸಿರುವ ಎಲ್ಲಾ ಪ್ರಸಿದ್ಧ  ಹಾಡುಗಳನ್ನು ಚಿತ್ರದಲ್ಲಿ ತರಲು ನನಗೆ ಆಸಕ್ತಿಯಿದೆ. ಅವರು 1948 ಮತ್ತು 1949 ರಲ್ಲಿ ನಮ್ಮ ತಂದೆಯ ಜೊತೆ ಕೆಲಸ ಮಾಡಿದ್ದರು ಎಂದು ನಿರ್ದೇಶಕ  ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com