ಬೆಂಗಳೂರು: ಸೈಕಾಲಾಜಿಕಲ್ ಥ್ರಿಲ್ಲರ್ 'ಎ' ಸಿನೆಮಾದ ಮೂಲಕ ನಿರ್ದೇಶಕ ಮತ್ತು ನಾಯಕನಟನಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಉಪೇಂದ್ರ ಯುವ ಸಿನೆಮಾ ಪ್ರೇಕ್ಷಕರಿಗೆ ತಮ್ಮ ವಿಚಿತ್ರ ಮ್ಯಾನರಿಸಂ ಮೂಲಕ ಹುಚ್ಚೆಬ್ಬಿಸಿದ್ದವರು. ನಂತರ ನಿರ್ದೇಶನ ಕಾರ್ಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡು ಹೆಚ್ಚು ನಟನೆಗೆ ಒತ್ತು ಕೊಟ್ಟವರು. ನಿರ್ದೇಶನ ಮಾಡುವಂತೆ ಆಗ ಅವರ ಅಭಿಮಾನಿಗಳ ಕೂಗು ಹೆಚ್ಚಿದಂತೆ, ಸೂಪರ್, ಉಪ್ಪಿ-೨ ಮುಂತಾದ ಸಿನೆಮಾಗಳನ್ನು ಮಾಡಿದರಾದರೂ, 'ಎ', 'ಉಪೇಂದ್ರ' ಮಟ್ಟಿಗೆ ಈ ಸಿನೆಮಾಗಳು ಯಶಸ್ಸು ಕಾಣಲಿಲ್ಲ.