ವಿರೋಧಗಳ ಬಳಿಕ 'ತೈಮೂರ್' ಹೆಸರು ಬದಲಾವಣೆಯ ಸುಳಿವು ನೀಡಿದ ಸೈಫ್!

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂಬ ಹೆಸರಿಟ್ಟಿರುವುದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ನಟ ಸೈಫ್ ಅಲಿ ಖಾನ್ ಅವರು ತಮ್ಮ ಮಗುವಿನ ಹೆಸರನ್ನು ಬದಲಾವಣೆ...
ಮಗು ತೈಮೂರ್ ಅಲಿ ಖಾನ್ ಜೊತೆಗೆ ಕರೀನಾ ಕಪೂರ್ ಖಾನ್
ಮಗು ತೈಮೂರ್ ಅಲಿ ಖಾನ್ ಜೊತೆಗೆ ಕರೀನಾ ಕಪೂರ್ ಖಾನ್
Updated on

ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂಬ ಹೆಸರಿಟ್ಟಿರುವುದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ನಟ ಸೈಫ್ ಅಲಿ ಖಾನ್ ಅವರು ತಮ್ಮ ಮಗುವಿನ ಹೆಸರನ್ನು ಬದಲಾವಣೆ ಮಾಡಲು ಚಿಂತನೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಬಾಲಿವುಡ್ ಚೆಲುವೆ ಕರೀನಾ ಕಪೂರ್ ಖಾನ್ ಅವರು ಡಿಸೆಂಬರ್ 20, 2016ರಂದು ಗಂಡುವಿಗೆ ಜನ್ಮ ನೀಡಿದ್ದರು. ನಂತರ ಸೈಫ್ ಹಾಗೂ ಕರೀನಾ ತಮ್ಮ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ನಾಮಕರಣ ಮಾಡುವುದಾಗಿ ಘೋಷಣೆ ಮಾಡಿದ್ದರು.

ಈ ಹೆಸರಿಗೆ ಸಾಮಾಜಿಕ ಜಾಲತಾಣದಾದ್ಯಂತ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಪವಿತ್ರ ಯುದ್ಧದ ಹೆಸರಿನಲ್ಲಿ ಅಸಂಖ್ಯ ಜನರನ್ನು ತೈಮೂರ್ ಹತ್ಯೆ ಮಾಡಿದ್ದ. ಇಂತಹ ವ್ಯಕ್ತಿಯ ಹೆಸರನ್ನು ಮಗುವಿಗೆ ಇಟ್ಟಿರುವುದು ಸರಿಯಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಟೀಕೆಗಳು ವ್ಯಕ್ತವಾಗುತ್ತಿದ್ದರೂ ಕರೀನಾ ಮಾತ್ರ ಹೆಸರಿಗೆ ಸಮರ್ಥಿಸಿಕೊಂಡೇ ಬಂದಿದ್ದರು. ಆದರೆ, ಇದೀಗ ಸೈಫ್ ಅಲಿ ಖಾನ್ ಅವರು ಮಗುವಿನ ಹೆಸರನ್ನು ಬದಲಾವಣೆ ಮಾಡುವ ಸುಳಿವುಗಳನ್ನು ನೀಡಿದ್ದಾರೆ.

'ದೆಹಲಿ ಟೈಮ್ಸ್'ವೊಂದರ ಸಂದರ್ಶನದಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್ ಅವರು, ಮಗುವಿನ ಹೆಸರನ್ನು ಬದಲಾವಣೆ ಮಾಡುವ ಸುಳಿವನ್ನು ನೀಡಿದ್ದಾರೆ. ಈ ವಿಚಾರವನ್ನು ನಾನು ಯಾರೊಂದಿಗೂ ಹೇಳಿಕೊಂಡಿಲ್ಲ. ಕೆಲ ವಾರಗಳ ಹಿಂದಿನಿಂದಲೂ ಮಗುವಿನ ಹೆಸರು ಬದಲಿಸಲು ಚಿಂತನೆ ನಡೆಸುತ್ತಿದ್ದೇನೆ. ಈ ಬಗ್ಗೆ ಕರೀನಾ ಬಳಿ ಮಾತನಾಡಿದ್ದೇನೆ. ಆಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಲೆ. ನಿಮ್ಮ ಅಭಿಪ್ರಾಯವನ್ನು ಜನರು ಗೌರವಿಸುತ್ತಿದ್ದಾರೆ. ಆದರೆ, ನೀವೇ ಗೌರವಿಸುತ್ತಿಲ್ಲ ಎಂದು ಹೇಳಿದಳು. ವಿಚಾರ ಜನರಿಗೆ ಸಂಬಂಧಿಸಿದ್ದಲ್ಲ. ನನ್ನ ಮಗ ಜನಪ್ರಿಯವಲ್ಲದ ವ್ಯಕ್ತಿಯಾಗುವುದು ನನಗಿಷ್ಟವಿಲ್ಲ ಎಂದು ಹೇಳಿದ್ದೆ. ಮಗುವಿಗೆ 1-2 ವರ್ಷವಾದ ಬಳಿಕ ಹೆಸರು ಬದಲಿಸುತ್ತೇನೆ. ಈ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ. ಏನು ಮಾಡುವುದು ಎಂದು ಹೇಳಿಕೊಂಡಿದ್ದಾರೆ.

ನಿಮ್ಮನ್ನು ಇಷ್ಟ ಪಡುವವರು ನಿಮ್ಮ ಅಭಿಪ್ರಾಯಗಳನ್ನು ಒಪ್ಪಿಕೊಂಡಾಗ, ಸಾರ್ವತ್ರಿಗೆ ಒಪ್ಪಿಗೆ, ಮಾನ್ಯತೆಗಳು ಅಗತ್ಯವಿರುವುದಿಲ್ಲ. ಆದರೆ, ಮಗುವಿಗೆ ಈ ರೀತಿಯ ಪ್ರಸಿದ್ಧಿ ಹಾಗೂ ಜನಪ್ರಿಯತೆಗಳು ಬರುವುದನ್ನು ನೋಡಿದಾಗ ಭಯವಾಗುತ್ತದೆ. ಜನರ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ. ನನ್ನ ಅಭಿಪ್ರಾಯಗಳನ್ನು ನಾನು ಒಪ್ಪಿಕೊಂಡರೆ ಸಾಕು, ತೋರ್ಪಡಿಕೆ ವಿಚಾರ ಬಂದಾಗ ನನಗೆ ಸಾರ್ವತ್ರಿಕ ಮಾನ್ಯತೆ, ಒಪ್ಪಿಗೆಗಳು ಬೇಡ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com