ಶ್ರದ್ಧಾ ಶ್ರೀನಾಥ್
ಸಿನಿಮಾ ಸುದ್ದಿ
ತೆಲುಗಿನ ಪೆಳ್ಳಿ ಚೂಪುಲು ಕನ್ನಡದ 'ಶಾದಿಭಾಗ್ಯ'
ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ಪೆಳ್ಳಿ ಚೂಪುಲು ಕನ್ನಡದಲ್ಲಿ ಶಾದಿಭಾಗ್ಯ ಎಂಬ ಟೈಟಲ್ ಹೊತ್ತು ಬರುತ್ತಿದೆ....
ಬೆಂಗಳೂರು: ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ಪೆಳ್ಳಿ ಚೂಪುಲು ಕನ್ನಡದಲ್ಲಿ ಶಾದಿಭಾಗ್ಯ ಎಂಬ ಟೈಟಲ್ ಹೊತ್ತು ಬರುತ್ತಿದೆ.
ಸಿನಿಮಾ ಟೈಟಲ್ ಗಾಗಿ ತುಂಬಾ ಚರ್ಚೆ ಮಾಡಲಾಯಿತು. ಸರಣಿ ಸಭೆ ನಡೆಸಿ ಸಮಾಲೋಚಿಸಿದ ನಂತರ ಶಾದಿಭಾಗ್ಯ ಟೈಟಲ್ ಎಲ್ಲರಿಗೂ ಮೆಚ್ಚುಗೆಯಾಯಿತು.
ನಿರ್ದೇಶಕರಾಗಿ ಪ್ರಮೋಷನ್ ಪಡೆದಿರುವ ಕೊರಿಯೋಗ್ರಾಫರ್ ಮುರಳಿ ಮಾಸ್ಟರ್ ಸಿನಿಮಾ ನಿರ್ದೇಶಿಸುತ್ತಿದ್ದು, ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಕಥೆ ಮತ್ತು ಅದರಲ್ಲಿ ಬರುವ ಪಾತ್ರದ ಬಗ್ಗೆ ಕೇಳಿ ಆಕರ್ಷಿತರಾದ ಶ್ರದ್ಧಾ ಸಿನಿಮಾದಲ್ಲಿ ನಟಿಸಲು ಸಹಿ ಮಾಡಿದ್ದಾರಂತೆ, ಹರ್ಷ ಎಂಟಟೈನರ್ ನಿರ್ಮಾಣದ ಶಾದಿಭಾಗ್ಯ ಸಿನಿಮಾದ ಶೂಟಿಂಗ್ ಮಾರ್ಚ್ ನಲ್ಲಿ ಆರಂಭಗೊಳ್ಳಲಿದೆ. ಶಾದಿಭಾಗ್ಯ ಸಿನಿಮಾ ತಂಡ ಉಳಿದ ಕಲಾವಿದರ ಆಯ್ಕೆಯಲ್ಲಿ ನಿರತವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ