ಸುದೀಪ್ ಅಭಿನಯದ ಹೆಬ್ಬುಲಿಗೆ ಸತ್ಯಮೇವ ಜಯತೇ ಪ್ರೇರಣೆ: ನಿರ್ದೇಶಕ ಕೃಷ್ಣ

ಅಮೀರ್ ಖಾನ್ ನಿರೂಪಿಸುತ್ತಿದ್ದ ಸತ್ಯಮೇವ ಜಯತೇ ಎಪಿಸೋಡ್ ಒಂದರಿಂದ ಪ್ರೇರಣೆಗೊಂಡು ಹೆಬ್ಬುಲಿ ಸಿನಿಮಾ ನಿರ್ದೇಶನ
ಸುದೀಪ್
ಸುದೀಪ್

ಬೆಂಗಳೂರು: ಎರಡು ವರ್ಷಗಳ ಕಠಿಣ ಶ್ರಮದ ನಂತರ ನಿರ್ದೇಶಕ ಕೃಷ್ಣ ಹೆಬ್ಬುಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಕರ್ನಾಟಕದಾದ್ಯಂತ 400 ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಸಾಮಾನ್ಯ ವರ್ಗದ ಪ್ರೇಕ್ಷಕರ ಮನರಂಜಿಸುವುದು ಇಂದು ಅತಿ ಮುಖ್ಯವಾಗಿದೆ. ಮಧ್ಯರಾತ್ರಿ ಬಂದು ಪ್ರೇಕ್ಷಕರು ಸಿನಿಮಾ ನೋಡುವುದು ನನಗೆ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ, ಕೃಷ್ಣ ಈ ಹಿಂದೆ ಯಶ್ ಅಭಿನಾಯದ ಗಜಕೇಸರಿ ಸಿನಿಮಾ ಮಾಡಿದ್ದರು.

ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಅಮೀರ್ ಖಾನ್ ನಿರೂಪಿಸುತ್ತಿದ್ದ ಸತ್ಯಮೇವ ಜಯತೆ ಯ ಎಪಿಸೋಡ್  ಒಂದರಿಂದ ಪ್ರೇರಣೆಗೊಂಡು ಹೆಬ್ಬುಲಿ ಸಿನಿಮಾ ನಿರ್ದೇಶನ ಮಾಡಿದ್ದೇನೆ ಎಂದು ಹೇಳಿದ್ದಾರೆ.ಹೆಬ್ಬುಲಿ ಒಂದು ಕಮರ್ಷಿಯಲ್ ಚಿತ್ರ, ಅದರೆ ಜೊತೆಗೆ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಸಂದೇಶ ಕೂಡ ಇದೆ. ಎರಡು ವರ್ಷಗಳ ಹಿಂದೆ ಸತ್ಯಮೇವ ಜಯತೆ ಕಾರ್ಯಕ್ರಮ ನೋಡುತ್ತಿದ್ದಾಗ ಒಂದು ಕಥೆ ನನ್ನ ತಲೆಗೆ ಹೊಳೆಯಿತು, ಇಂಥಹ ದೊಡ್ಡ ವಿಷಯ ಏಕೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲಿಲ್ಲ ಎಂದು ಯೋಚಿಸಿ ಅದರ ಬಗ್ಗೆ ಗಮನ ಹರಿಸಿ ಚಿತ್ರಕಥೆ ಮಾಡಿದ್ದೇನೆ, ಹೆಬ್ಬುಲಿ ಸಂದೇಶ ಸಿನಿಮಾ ಮೂಲಕ ಭಾರತದ ಎಲ್ಲರನ್ನೂ ತಲುಪಲಿದೆ ಎಂದು ಅವರು ಹೇಳಿದ್ದಾರೆ.

ಸತ್ಯಮೇವ ಜಯತೇ ಡಾಕ್ಯುಮೆಂಟರಿ ರೀತಿ ಇದೆ, ಆದರೆ ಹೆಬ್ಬುಲಿ ಮನರಂಜನಾತ್ಮಕ ಸಿನಿಮಾ, ಜೊತೆಗೆ ಸಮಾಜಕ್ಕೆ ಇದರಲ್ಲಿ ಉತ್ತಮ  ಸಂದೇಶವೂ ಇದೆ ಎಂದು ಕೃಷ್ಣ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com