'ಉಪ್ಪಿ ರುಪೀ' ನೋಟು ಹಿಂಪಡೆತ ನಿರ್ಧಾರದ ಬಗೆಗಿನ ಸಿನೆಮಾದಲ್ಲಿ ಉಪೇಂದ್ರ

ನಟ-ನಿರ್ದೇಶಕ ಉಪೇಂದ್ರ ತಮ್ಮ ೫೦ ನೆಯ ಸಿನೆಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಮಾರ್ಚ್ ೯ ರಿಂದ ಅವರು ಹೊಸ ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ನಟ-ನಿರ್ದೇಶಕ ಉಪೇಂದ್ರ
ನಟ-ನಿರ್ದೇಶಕ ಉಪೇಂದ್ರ
ಬೆಂಗಳೂರು: ನಟ-ನಿರ್ದೇಶಕ ಉಪೇಂದ್ರ ತಮ್ಮ  ೫೦ ನೆಯ ಸಿನೆಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಮಾರ್ಚ್ ೯ ರಿಂದ ಅವರು ಹೊಸ ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. 
'ಉಪ್ಪಿ ರುಪೀ' ಎಂಬ ಶೀರ್ಷಿಕೆ ಹೊತ್ತಿರುವ ಕೆ ಮಾದೇಶ ನಿರ್ದೇಶನದ ಈ ಚಿತ್ರಕ್ಕೆ ಆಸಕ್ತಿದಾಯಕ ಸ್ಕ್ರಿಪ್ಟ್ ಇದೆಯಂತೆ. ಇದರ ಕಥೆಯ ಬಗ್ಗೆ ಹಲವು ಊಹಾಪೋಹಗಳಲಿದ್ದು ಇದು ರಿಮೇಕ್ ಇರಬಹುದು ಎಂದು ಕೂಡ ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಸ್ಪಷ್ಟಿಕರಣ ನೀಡುವ ಮಾದೇಶ್ "'ಉಪ್ಪಿ ರುಪೀ' ಮೋದಿಯವರ ನೋಟು ಹಿಂಪಡೆತ ನಿರ್ಧಾರ ಮತ್ತು ಅದರ ಪರಿಣಾಮಗಳನ್ನು ಚರ್ಚಿಸಲಿದೆ" ಎನ್ನುತ್ತಾರೆ. "ಈ ಪಾತ್ರವನ್ನು ಉಪೇಂದ್ರ ಅವರಿಗಾಗಿಯೇ ಬರೆದಿರುವುದು ಅವರೇ ನಟಿಸಬೇಕೆಂಬುದು ನಮ್ಮಾಸೆ" ಎನ್ನುತ್ತಾರೆ. 
ಈ ಸಿನೆಮಾ ನೋಟು ಹಿಂಪಡೆತ ನಿರ್ಧಾರ, ಭ್ರಷ್ಟಾಚಾರ ಮತ್ತು ಕಪ್ಪುಹಣದ ಬಗ್ಗೆ ಎನ್ನುವ ಮಾದೇಶ್ "ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ನಿರಂತರವಾಗಿದೆ. ನೋಟು ಹಿಂಪಡೆತ ನಿರ್ಧಾರ ಕೂಡ ಅದನ್ನು ಏನು ಮಾಡಲಾಗಲಿಲ್ಲ. ಒಳ್ಳೆಯದು ಮಾಡಲು ಕೆಲವರು ನಿರಂತರವಾಗಿ ಶ್ರಮಿಸುತ್ತಿದ್ದರೆ ಕೆಲವು ಭ್ರಷ್ಟ ಅಧಿಕಾರಗಳು ಅದನ್ನು ಸೋಲಿಸಲು ಪ್ರಯತ್ನಿಸುತ್ತಿರುತ್ತಾರೆ. ಇದು ಜಾಗತಿಕ ಸತ್ಯ. ಇದರ ಬಗ್ಗೆ ಸಿನೆಮಾ ಚರ್ಚಿಸಲಿದೆ" ಎನ್ನುತ್ತಾರೆ. 
ಉಪೇಂದ್ರ ಸಿನೆಮಾದಲ್ಲಿ ಸಾಮಾನ್ಯನ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಮಾದೇಶ್ "ಆದರೆ ಅವರ ಶೈಲಿ ಮತ್ತು ಪಂಚ್ ಇರಲಿದೆ" ಎಂದಿದ್ದಾರೆ. ಉಪ್ಪಿ ಈ ಸಿನೆಮಾದ ಸ್ಕ್ರಿಪ್ಟ್ ಅನ್ನು ಬಹಳ ಮೆಚ್ಚಿರುವುದಾಗಿಯೂ ನಿರ್ದೇಶಕರು ತಿಳಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com