ಆಸ್ಕರ್‌ಗೆ ಹಾರಲಿದೆಯೇ ಪುಷ್ಪಕ ವಿಮಾನ?

ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಅವರ 100ನೇ ಚಿತ್ರ ಪುಷ್ಪಕ ವಿಮಾನ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಚಿತ್ರ ಅತ್ಯುತ್ತಮ ವಿದೇಶಿ ಭಾಷಾ ಅಳವಡಿತ ಚಿತ್ರಕಥೆ...
ಪುಷ್ಪಕ ವಿಮಾನ
ಪುಷ್ಪಕ ವಿಮಾನ
Updated on
ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಅವರ 100ನೇ ಚಿತ್ರ ಪುಷ್ಪಕ ವಿಮಾನ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಚಿತ್ರ ಅತ್ಯುತ್ತಮ ವಿದೇಶಿ ಭಾಷಾ ಅಳವಡಿತ ಚಿತ್ರಕಥೆ ಗುಂಪಿನಲ್ಲಿ ಸ್ಪರ್ಧಿಸಲಿದೆ. 
ನವ ನಿರ್ದೇಶಕ ಎಸ್ ರವೀಂದ್ರನಾಥ್ ಅವರ ಚೊಚ್ಚಲ ನಿರ್ದೇಶನದ ಪುಷ್ಪಕ ವಿಮಾನ ಚಿತ್ರವನ್ನು ಆಸ್ಕರ್ ಗೆ ನಾಮನಿರ್ದೇಶನ ಮಾಡುವ ಪ್ರಚಾರ ಕಾರ್ಯವನ್ನು ಹಿಂದಿವುಡ್ ಸಂಸ್ಥೆ ಒಪ್ಪಿಕೊಂಡಿದೆ ಎಂದು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ವಿಖ್ಯಾತ್ ಅವರು ಹೇಳಿದ್ದಾರೆ. 
ನ್ಯೂಯಾರ್ಕ್ ನಲ್ಲಿ ಚಿತ್ರದ ಸೆನ್ಸಾರ್ ಮಾಡಿ ನಂತರ ಚಿತ್ರದ ವಿಶೇಷ ಪ್ರದರ್ಶನವನ್ನು ಮಾಡಲಾಗುವುದು. ಮಾರ್ಚ್ ನಲ್ಲಿ ಆಸ್ಕರ್ ಮೊದಲ ಸುತ್ತಿನ ಸ್ಪರ್ಧೆಗೆ ಚಿತ್ರವನ್ನು ಕಳುಹಿಸಲಾಗುವುದು ಎಂದು ವಿಖ್ಯಾತ್ ಹೇಳಿದ್ದಾರೆ. 
ಚಿತ್ರದ ಪ್ರಚಾರ ಮತ್ತು ಇನ್ನಿತರ ಕೆಲಸಗಳಿಗಾಗಿ ಸುಮಾರು 20 ಲಕ್ಷ ರುಪಾಯಿ ವೆಚ್ಚವಾಗಲಿದೆ. ಇದೆಲ್ಲವನ್ನು ಹಿಂದಿವುಡ್ ನೋಡಿಕೊಳ್ಳಲಿದೆ ಎಂದು ವಿಖ್ಯಾತ್ ತಿಳಿಸಿದ್ದಾರೆ. 
ಚಿತ್ರದಲ್ಲಿ ರಮೇಶ್ ಅರವಿಂದ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಅವರಿಗೆ ಮಗಳಾಗಿ ಯುವಿನ ಪಾರ್ಥವಿ ಕಾಣಿಸಿಕೊಂಡಿದ್ದು, ರಚಿತ ರಾಮ್ ಮತ್ತು ಜೂಹಿ ಚಾವ್ಲ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು ಕೇಳಲು ಹಿತವಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com