ಹೊಸವರ್ಷದಲ್ಲಿ 'ಕೆ ಜಿ ಎಫ್'ನಲ್ಲಿ ಯಶ್! ನಾಳೆ ನಟನ ಹುಟ್ಟುಹಬ್ಬ

2008 ರಲ್ಲಿ ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದು 'ಮೊಗ್ಗಿನ ಮನಸು' ಸಿನೆಮಾದಲ್ಲಿ ನಟಿಸಿದ ಮೇಲೆ ನಟ ಯಶ್ ಹಿಂದಿರುಗಿ ನೋಡಿದ್ದೇ ಇಲ್ಲ. ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್ ನಟನಾಗಿ ಬೆಳೆದಿರುವ ಇವರು ನಾಳೆ
ನಟ ಯಶ್
ನಟ ಯಶ್
Updated on
ಬೆಂಗಳೂರು: ೨೦೦೮ ರಲ್ಲಿ ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದು 'ಮೊಗ್ಗಿನ ಮನಸು' ಸಿನೆಮಾದಲ್ಲಿ ನಟಿಸಿದ ಮೇಲೆ ನಟ ಯಶ್ ಹಿಂದಿರುಗಿ ನೋಡಿದ್ದೇ ಇಲ್ಲ. ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್ ನಟನಾಗಿ ಬೆಳೆದಿರುವ ಇವರು ನಾಳೆ ತಮ್ಮ ೩೧ ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್ ಜೊತೆಗೆ ಇತ್ತೀಚೆಗಷ್ಟೇ ಸಪ್ತಪದಿ ತುಳಿದಿರುವ ನಟ, ಹೊಸ ವರ್ಷವನ್ನು ಪ್ರಶಾಂತ್ ನೀಲ್ ಅವರ 'ಕೆಜಿಎಫ್' ಮೂಲಕ ಪ್ರಾರಂಭಿಸಲು ತವಕದಿಂದಿದ್ದಾರೆ. 
ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಬಹು ನಿರೀಕ್ಷಿತ ಸಿನೆಮಾ ಈ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆಯಿದೆ. ಈ ಸಿನೆಮಾದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಶಾಂತ್ "ಇದು ೧೯೭೦ ರ ಹಿನ್ನಲೆಯ ಕಥೆ ಮತ್ತು ಆ ಸಮಯದ ಪ್ರದೇಶವನ್ನು ಬಾದಾಮಿ ಮತ್ತು ಕೋಲಾರದಲ್ಲಿ ಸೃಷ್ಟಿಸುತ್ತಿದ್ದೇವೆ" ಎನ್ನುತ್ತಾರೆ.
"ಅಲ್ಲಿ ನಾವು ಮುಂದಿನ ನಾಲ್ಕೈದು ತಿಂಗಳು ಕ್ಯಾಂಪ್ ಹೂಡಲಿದ್ದೇವೆ. ಈ ವಿಷಯದ ಬಗ್ಗೆ ಸುಮಾರು ಒಂದು ವರೆ ವರ್ಷ ಅಧ್ಯಯನ ಮಾಡಿದ್ದೇವೆ. ನಿರ್ದೇಶನ ತಂಡದಲ್ಲಿ ಏಳು ಸದಸ್ಯರಿದ್ದೇವೆ" ಎಂದು ತಿಳಿಸುವ ಪ್ರಶಾಂತ್ ಈ ಸಿನೆಮಾದ ಕಥೆ ಇಂದಿಗೂ ಪ್ರಸ್ತುತ ಎನ್ನುತ್ತಾರೆ. 
ಸದ್ಯಕ್ಕೆ ಯಶ್ ಮಾತ್ರ ಮುಖ್ಯ ತಾರಾಗಣಕ್ಕೆ ಅಂತಿಮವಾಗಿದ್ದು, ಮುಖ್ಯ ಪಾತ್ರಗಳಿಗಾಗಿ ಅನಂತ ನಾಗ್, ರಮ್ಯ ಕೃಷ್ಣ ಮತ್ತು ಅಚ್ಯುತ್ ಕುಮಾರ್ ಅವರನ್ನು ಚಿತ್ರತಂಡ ಪರಿಗಣಿಸುತ್ತಿದೆ. "ಮುಖ್ಯ ತಾರಾಗಣದಲ್ಲಿ ೧೫ ಕಲಾವಿದರು ಇರಲಿದ್ದಾರೆ. ೭೦ ರ ದಶಕಕ್ಕೆ ಒಗ್ಗಿಕೊಳ್ಳುವ ಹೊಸ ಮುಖಗಳನ್ನು ಪರಿಚಯಿಸಲಿದ್ದೇವೆ" ಎಂದು ಕೂಡ ಪ್ರಶಾಂತ್ ತಿಳಿಸುತ್ತಾರೆ. ರವಿ ಬಸರೂರ್ ಸಂಗೀತ ಮತ್ತು ಭುವನ್ ಗೌಡ ಸಿನೆಮ್ಯಾಟೋಗ್ರಫಿ ಸಿನೆಮಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com