ಬೆಂಗಳೂರು: ಶೂಟಿಂಗ್ ವೇಳೆ ಸಹ ಕಲಾವಿದೆಯ ನಿಗೂಢ ಸಾವು

ಸಿನಿಮಾ ಶೂಟಿಂಗ್ ವೇಳೆ ಸಹ ಕಲಾವಿದಯೊಬ್ಬರು ಲಿಫ್ಟ್ ನ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ..
ಅಪಾರ್ಟ್ ಮೆಂಟ್  ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪದ್ಮಾವತಿ
ಅಪಾರ್ಟ್ ಮೆಂಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪದ್ಮಾವತಿ

ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ಇಬ್ಬರು ಖಳನಟರು ದುರಂತ ಸಾವಿಗೀಡಾದ ದುರ್ಘಟನೆ ಸಾರ್ವಜನಿಕರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಸಿನಿಮಾ ಶೂಟಿಂಗ್ ವೇಳೆ ಸಹ ಕಲಾವಿದಯೊಬ್ಬರು ಲಿಫ್ಟ್ ನ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ನಗರದ ಹೊರವಲಯದ ರಾಜಾನುಕುಂಟೆ ಸಮೀಪದ ಅವಲಹಳ್ಳಿಯಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಸಿನಿಮಾ ಶೂಟಿಂಗ್‌ ನಡೆಯುತ್ತಿದ್ದ ವೇಳೆ 18ನೇ ಮಹಡಿಯಿಂದ ಬಿದ್ದು ಸಹ ಕಲಾವಿದೆ ಪದ್ಮಾವತಿ(44) ಮೃತಪಟ್ಟಿದ್ದಾರೆ.

ನಂದ ಕಿಶೋರ್‌ ನಿರ್ದೇಶನ, ರವಿಚಂದ್ರನ್‌ ಪುತ್ರ ಮನೋರಂಜನ್‌ ನಾಯಕ ನಟನಾಗಿರುವ ವಿಐಪಿ ಸಿನಿಮಾ ಶೂಟಿಂಗ್‌ ವೇಳೆ ಸೋಮವಾರ ಮಧ್ಯಾಹ್ನ 3.30ರ ವೇಳೆ ಕಟ್ಟಡದ ಲಿಫ್ಟ್‌ ಪ್ಯಾಸೇಜ್‌ನಿಂದ ಸಹ ಕಲಾವಿದೆ ಬಿದ್ದಿದ್ದಾರೆ. ಆದರೆ, ಶೂಟಿಂಗ್‌ ಮುಗಿದು ತುಂಬಾ ಹೊತ್ತು ಕಳೆದರೂ ಸಹ ಕಲಾವಿದೆ ನಾಪತ್ತೆಯಾಗಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ.

ಸಂಜೆ ನಂತರ ಪದ್ಮಾವತಿ ಕಾಣಿಸದ ಕಾರಣ ಜತೆಗಿದ್ದ ಸಹ ಕಲಾವಿದೆಯೊಬ್ಬರು ಹುಡುಕಾಟ ನಡೆಸಲು ಆರಂಭಿಸಿದರು. ಕೊನೆಗೆ ಕಟ್ಟಡದಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ ಸೇರಿದಂತೆ ಇತರರು ಹುಡುಕಾಟ ನಡೆಸಿದಾಗ ಪದ್ಮಾವತಿ ಅವರ ಶವ ಕಟ್ಟಡದ ನೆಲ ಮಹಡಿಯಲ್ಲಿರುವ ಲಿಫ್ಟ್‌ ಪ್ಯಾಸೇಜ್‌ನಲ್ಲಿ ಪತ್ತೆಯಾಗಿದೆ. ಪದ್ಮಾವತಿ ಜತೆಗಿದ್ದ ಇತರ ಕಲಾವಿದರು ಪೊಲೀಸರಿಗೆ ನೀಡಿದ್ದಾರೆ. ಪದ್ಮಾವತಿ ಜಕ್ಕೂರು ನಿವಾಸಿಯಾಗಿದ್ದಾರೆ.

ಸುಮಾರು 120 ಸಿಬ್ಬಂದಿ ಸಂಜೆ 5.30ರ ವೇಳೆಗೆ ಶೂಟಿಂಗ್ ಪ್ಯಾಕ್ ಅಪ್ ಮಾಡಿದ್ದಾರೆ. ಅವರಿಗೆ ಪೇಮೆಂಟ್ ನೀಡುವ ವೇಳೆ ಪದ್ಮಾವತಿ ನಾಪತ್ತೆಯಾಗಿರುವುದು ತಿಳಿದು ಬಂದಿದೆ.  ಆವಲಹಳ್ಳಿ ಕೆರೆ ಮುಂಭಾಗದಲ್ಲಿ ಪ್ರೆಸ್ಟೀಜ್‌ ಕಂಪನಿಗೆ ಸೇರಿದ ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿದೆ. ಲಿಫ್ಟ್‌ ಗುಂಡಿಗೆ ಅಡ್ಡವಾಗಿ ಸಿಮೆಂಟ್‌ ಶೀಟ್‌ ಇಡಲಾಗಿತ್ತು. ಇದರ ಮೇಲೆ ಆಯತಪ್ಪಿ ಬಿದ್ದು ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

ನಾನು ಆಕೆಯನ್ನು ಮಧ್ಯಾಹ್ನ 3 ಗಂಟೆ ವೇಳೆಗೆ ನೋಡಿದ್ದೆ ಕೊನೆ ಎಂದು ಪದ್ಮಾವತಿ ಸ್ನೇಹಿತೆ ತಿಳಿಸಿದ್ದಾರೆ. ಆದರೆ ನಮಗೆ ರಾತ್ರಿ 9 ಗಂಟೆ ವೇಳೆಗೆ ನಮಗೆ ವಿಷಯ ತಿಳಿಯಿತು ಎಂದು ಪೊಲೀಸರು ಹೇಳಿದ್ದಾರೆ. ನಾವು ಸಿನಿಮಾ ನಿರ್ದೇಶಕರನ್ನು ಈ ಸಂಬಂಧ ವಿಚಾರಿಸಲು ಸಂಪರ್ಕಿಸಿದರೇ ಯಾರೋಬ್ಬರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಹೇಳಿದ್ದಾರೆ.

ಸಿನಿಮಾ ತಂಡಕ್ಕೆ ಸಂಜೆ 5 ಗಂಟೆ ವೇಳೆಗೆ ವಿಷಯ ತಿಳಿದಿದೆ, ಆದರೆ ನಮಗೆ ತಡವಾಗಿ ವಿಷಯ ತಿಳಿಸಿದ್ದಾರೆ. ಕರೆ ಮಾಡಿ ಯಲಹಂಕ ಸರ್ಕಾರಿ ಆಸ್ಪತ್ರೆ ಬಳಿ ಬರಲು ಹೇಳಿದರು, ಅಲ್ಲಿ ಹೋದರೆ ಆಸ್ಪತ್ರೆ ಬಳಿ ಯಾರೋಬ್ಬರು ಇರಲಿಲ್ಲ. ನಂತರ ಘಟನೆ ನಡೆದ ಸ್ಥಳಕ್ಕೆ ಹೋದರೆ ಶವವನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು.

ಕಟ್ಟಡದಲ್ಲಿ ಶೂಟಿಂಗ್‌ ಮಾಡಲು ವಿಐಪಿ ಸಿನಿಮಾ ತಂಡ ಅಧಿಕೃತವಾಗಿ ಅನುಮತಿ ಪಡೆದಿರಲಿಲ್ಲ. ಕೇವಲ ಕಟ್ಟಡದ ಪ್ರಾಜೆಕ್ಟ್ ಮ್ಯಾನೇಜರ್ ಅವರಿಂದ ಅನುಮತಿ ಪಡೆದುಕೊಂಡಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com