ನಟಿ ಪೂಜಾಗಾಂಧಿ ವಿರುದ್ಧ ವಾರಂಟ್

ಚೆಕ್‌ಬೌನ್ಸ್‌ ಪ್ರಕರಣದಲ್ಲಿ ನಟಿ ಪೂಜಾಗಾಂಧಿ ಮತ್ತು ಅವರ ತಂದೆ ಪವನ್‌ಗಾಂಧಿ ವಿರುದ್ಧ ನ್ಯಾಯಾಲಯ ವಾರೆಂಟ್‌ ಜಾರಿ...
ಪೂಜಾ ಗಾಂಧಿ
ಪೂಜಾ ಗಾಂಧಿ
Updated on

ಬೆಂಗಳೂರು: ಚೆಕ್‌ಬೌನ್ಸ್‌ ಪ್ರಕರಣದಲ್ಲಿ ನಟಿ ಪೂಜಾಗಾಂಧಿ ಮತ್ತು ಅವರ ತಂದೆ ಪವನ್‌ಗಾಂಧಿ ವಿರುದ್ಧ ನ್ಯಾಯಾಲಯ ವಾರೆಂಟ್‌ ಜಾರಿ ಮಾಡಿದೆ.

ವಿಜಯ್‌ಕುಮಾರ್‌ ಎನ್ನುವವರಿಂದ ಹಣ ಪಡೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 16ನೇ ಎಸಿಎಂಎಂ ನ್ಯಾಯಾಲಯದಿಂದ ವಾರೆಂಟ್‌ ಜಾರಿಯಾಗಿದೆ. ಸಿನಿಮಾ ಮಾಡುವುದಾಗಿ 4 ಕೋಟಿ ರೂ ಪಡೆದಿದ್ದರ ಸಂಬಂಧ ನ್ಯಾಯಾಲಯ ವಾರೆಂಟ್‌ ನೀಡಿದೆ.

ಸಿನಿಮಾ ಮಾಡುವುದಾಗಿ ಹೇಳಿ ಪೂಜಾಗಾಂಧಿ ಮತ್ತು ಅವರ ತಂದೆ ನನ್ನಿಂದ 4 ಕೋಟಿ ಪಡೆದಿದ್ದರು. ಸಿನಿಮಾ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಹಣವನ್ನು ವಾಪಾಸ್‌ ಕೇಳಿದ್ದೆ. ಆ ವೇಳೆ ಚೆಕ್‌ ನೀಡಿದ್ದರು. ಅವರು ನೀಡಿದ್ದ ಚೆಕ್‌ಬೌನ್ಸ್‌ ಆಗಿದೆ ಎಂದು ವಿಜಯ್‌ಕುಮಾರ್‌ ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com