
ಬೆಂಗಳೂರು: ಬಿಗ್‌ಬಾಸ್ ಸೀಸನ್-4 ಪ್ರಾರಂಭವಾಗಿ 99 ದಿನ ಪೂರ್ತಿಯಾಗಿದೆ. ಬಿಗ್‌ಬಾಸ್ ತನ್ನ ನೂರನೇ ಎಪಿಸೋಡ್‌ಗೆ ಕಾಲಿಟ್ಟಿದೆ. ಭುವನ್ ಪೊನ್ನಣ್ಣ 99 ದಿನಗಳ ತಮ್ಮ ಬಿಗ್ ಬಾಸ್ ಜರ್ನಿ ಅಂತ್ಯಗೊಳಿಸಿದ್ದಾರೆ.
ಈ ವಾರ ಎಲಿಮಿನೇಶನ್‌ಗೆ ಭುವನ್, ಮಾಳವಿಕ, ರೇಖಾ, ಪ್ರಥಮ್ ನಾಮಿನೇಟ್ ಆಗಿದ್ರು. ವೀಕ್ಷಕರಿಗೆ ಯಾರನ್ನು ಮನೆಯಿಂದ ಹೊರಹಾಕಬೇಕೆಂದಿದ್ದಿರೀ ಎನ್ನುವುದನ್ನು ಎಸ್‌ಎಂಎಸ್ ಮೂಲಕ ವೋಟ್ ಮಾಡುವಂತೆ ಬಿಗ್‌ಬಾಸ್ ಕೋರಿದ್ದರು. ಆ ಪ್ರಕಾರ ಕರ್ನಾಟಕದ ಜನತೆ ಭುವನ್‌ರನ್ನು ಮನೆಯಿಂದ ಹೊರಹಾಕಿದ್ದಾರೆ.
ಈ ಮೂಲಕ ರೇಖಾ, ಪ್ರಥಮ್ ರನ್ನು ಮನೆಯೊಳಗೆ ಉಳಿಸಿಕೊಂಡಿದ್ದಾರೆ. ಹಾಗಾಗಿ ಮೋಹನ್, ಪ್ರಥಮ್, ರೇಖಾ, ಕೀರ್ತಿ, ಶಾಲಿನಿ, ಮಾಳವಿಕ ಬಿಗ್‌ಬಾಸ್ ಮನೆಯೊಳಗೆ ಇಂದಿಗೆ ತಮ್ಮ ನೂರು ದಿನಗಳ ಜರ್ನಿಯನ್ನು ಪೂರೈಸಿದ್ದಾರೆ.
ಎಲಿಮಿನೇಟ್ ಆದ ಭುವನ್ ಗೆ ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನು ನೀಡಿತ್ತು. ಮನೆಯ ಸದಸ್ಯರಲ್ಲಿ ಒಬ್ಬರನ್ನು ನೇರವಾಗಿ ಗ್ರಾಂಡ್ ಫಿನಾಲೆಗೆ ಆಯ್ಕೆ ಮಾಡುವಂತೆ ಸೂಚಿಸಿತು. ಅದರಂತೆ ಭುವನ್ ನಟ ಮೋಹನ್ ಅವರ ಹೆಸರು ಸೂಚಿಸಿದ್ದಾರಂತೆ, ಇದರಂತೆ ಮೊಹನ್ ಗ್ರಾಂಡ್ ಫಿನಾಲೆಗೆ ಎಂಟ್ರಿ ನೀಡಿದ ಬಿಗ್ ಬಾಸ್ ಮನೆಯ ಮೊದಲ ಸದಸ್ಯರಾಗಿದ್ದಾರೆ.
Advertisement