ಇತರ ನಟರ ಬದಲು ಆಕ್ಷನ್ ಕಿಂಗ್ ಅವರಣೆ ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ, ಈ ಪಾತ್ರಕ್ಕೆ ಬೇರೆ ಯಾರ ಹೆಸರು ನನ್ನ ಮನಸ್ಸಿನಲ್ಲಿರಲಿಲ್ಲ ಎಂದಿದ್ದಾರೆ. ಮೊದಲಿಗೆ ಅವರನ್ನು ಕೇಳಲು ಆತಂಕಗೊಂಡಿದ್ದೆ ಎನ್ನುವ ಹನು "ನಾನು ಅವರಿಗೆ ಕಥೆ ಹೇಳುವ ಧೈರ್ಯ ಕೂಡ ಹೊಂದಿರಲಿಲ್ಲ. ಖಳನಾಯಕನ ಪಾತ್ರಕ್ಕೆ ಅವರು ಹೇಗೆ ಪ್ರತಿಕ್ರಿಯಿಸಬಹುದು ಎಂದು ಚಿಂತಿಸುತ್ತಾ ಕುಳಿತಿದ್ದೆ. ಆದರೆ ಅವರು ಕಥೆ ಕೇಳಿದ ತಕ್ಷಣ ಪಾತ್ರ ಇಷ್ಟಪಟ್ಟರು" ಎಂದು ತಿಳಿಸುತ್ತಾರೆ.