ಅಮೃತ್ ಕುಮಾರ್ ನಿರ್ದೇಶನ 'ರಿಕ್ತ' ವಿಜಯ್ ಅವರ ಮೂರನೇ ಚಿತ್ರ. ಈ ಸಿನೆಮಾದ ಪಾತ್ರದಲ್ಲಿ ವಿಭಿನ್ನ ಛಾಯೆಗಳಲ್ಲಿ ನಟಿಸಿರುವುದಾಗಿ ಹೇಳುವ ನಟ "ಮಗು, ಲವರ್ ಬಾಯ್, ಕುಡುಕನಾಗಿ ಕಾಣಿಸಿಕೊಳ್ಳಲಿದ್ದೇನೆ" ಎನ್ನುತ್ತಾರೆ. "ಆದರೆ ನಾನು ದೆವ್ವವಾಗಿ ಕಾಣಿಸಿಕೊಳ್ಳುವುದು ಉತ್ತಮ ಭಾಗ" ಎನ್ನುವ ಅವರು "ನನಗೆ ಮನುಷ್ಯರನ್ನು ಕಂಡರೆ ಭಯ, ಸಿನೆಮಾದಲ್ಲಿ ಅದೇ ತಿರುವು " ಎಂದು ತಿಳಿಸುವ ವಿಜಯ್ ಇದು ಸಂಪೂರ್ಣ ಮನರಂಜನಾ ಚಿತ್ರ ಎನ್ನುತ್ತಾರೆ.