
ಚೆನ್ನೈ: ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ಚೆನ್ನೈಎಕ್ಸ್ ಪ್ರೆಸ್' ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರ ಪ್ರಕರಣವೊಂದು ಗುರುವಾರ ದಾಖಲಾಗಿದೆ.
25 ವರ್ಷದ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಮೊರಾನಿಯವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಮುಂಬೈನಲ್ಲಿ ವಿವಿಧೆಡೆ ಅತ್ಯಾಚಾರ ನಡೆಸಿರುವುದಾಗಿ ಯುವತಿಯೊಬ್ಬಳು ನಿರ್ಮಾಪಕ ಮೊರಾನಿಯವರ ವಿರುದ್ದ ದೂರು ದಾಖಲಿಸಿದ್ದಳು. ಮೊರಾನಿಯವರ ವಿರುದ್ದ ಐಪಿಸಿ ಸೆಕ್ಷನ್ 417 (ಮೋಸ), 376 (ಅತ್ಯಾಚಾರ), 342 (ಅಕ್ರಮ ಬಂಧನ), 506 (ಬೆದರಿಕೆ), 493 (ಕಾನೂನುಬದ್ಧ ಮದುವೆಯಾಗುವುದಾಗಿ ನಂಬಿಕಿ ಮೋಸ) ಇನ್ನಿತರೆ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದ್ದು, ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಅತ್ಯಾಚಾರ ಆರೋಪವನ್ನು ಮೊರಾನಿಯವರು ತಿರಸ್ಕರಿಸಿದ್ದು, ಇದೊಂದು ನಕಲಿ ಮತ್ತು ಸುಳ್ಳು ಆರೋಪವಾಗಿದೆ. ನನ್ನ ವರ್ಚಸ್ಸನ್ನು ಹಾಳು ಮಾಡುವ ಸಲುವಾಗಿ ಈ ರೀತಿಯಾಗಿ ಆರೋಪವನ್ನು ಮಾಡಲಾಗಿದೆ ಎಂದುಹೇಳಿದ್ದಾರೆ.
ಕರೀಂ ಮೊರಾನಿ ಬಾಲಿವುಡ್ ಹಿಟ್ ಚಿತ್ರಗಳಾದ ಚೆನ್ನೈ ಎಕ್ಸ್ ಪ್ರೆಸ್, ಹ್ಯಾಪಿ ನ್ಯೂ ಇಯರ್, ರಾ ಒನ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು.
Advertisement