ಮನಿಲಾ: ಮಿಸ್ ಫ್ರಾನ್ಸ್ ಐರಿಸ್ ಮಿಟ್ಟೆನಾರೆ 2017ನೇ ಸಾಲಿನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ.
ಫಿಲಿಫೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆದ ಸ್ಪರ್ಧೆಯಲ್ಲಿ 24 ವರ್ಷದ ಐರಿಸ್ ಮಿಸ್ ಯೂನಿವರ್ಸ್ ಆಗಿ ಕಿರೀಟ ತೊಟ್ಟರೆ, ಹೈಟಿಯ ಪೆಲಿಸ್ಸಿಯರ್ ಮೊದಲ ರನ್ನರ್ ಅಪ್ ಆಗಿ ಮತ್ತು ಕೊಲಂಬಿಯಾದ ಆಂಡ್ರೆ ತೊವರ್ ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.
ಪರ್ಷಿಯಾ ಮೂಲದವರಾದ ಐರಿಸ್ ಮಿಟ್ಟೆನಾರೆ ಪ್ರಸ್ತುತ ಡೆಂಟಲ್ ಸರ್ಜರಿಯಲ್ಲಿ ಪದವಿ ಓದುತ್ತಿದ್ದಾರೆ. ದಂತ ಮತ್ತು ಬಾಯಿಯ ನೈರ್ಮಲ್ಯಕ್ಕೆ ಜನರಿಗೆ ಸೂಕ್ತ ಸಲಹೆ, ಮಾಹಿತಿ ನೀಡಲು ಅವರು ಮಿಸ್ ಯೂನಿವರ್ಸ್ ವೇದಿಕೆಯನ್ನು ಬಳಸಿಕೊಂಡಿದ್ದಾರೆ.
ಸ್ಪರ್ಧೆಯ ಅಂತಿಮ 13 ಸ್ಪರ್ಧಿಗಳಲ್ಲಿ ಕೇನ್ಯಾ, ಇಂಡೋನೇಷ್ಯಾ, ಮೆಕ್ಸಿಕೊ, ಪೆರು, ಪನಾಮಾ, ಕೊಲಂಬಿಯಾ, ಫಿಲಿಫೈನ್ಸ್, ಕೆನಡಾ, ಬ್ರೆಜಿಲ್, ಫ್ರಾನ್ಸ್, ಹೈಟಿ, ಥೈಲ್ಯಾಂಡ್ಸ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ದೆಶೌನ ಬರ್ಬರ್ ಇದ್ದರು.
ಈ ಬಾರಿಯ ತೀರ್ಪುಗಾರರಲ್ಲಿ ಮಾಜಿ ಮಿಸ್ ಯೂನಿವರ್ಸ್, ಬಾಲಿವುಡ್ ನಟಿ ಸುಷ್ಮಿತಾ ಸೇನ್ ಕೂಡ ಭಾಗವಹಿಸಿದ್ದರು.