ನವದೆಹಲಿ: ನಟ ರಜನಿಕಾಂತ್ ಪುತ್ರಿ ಸೌಂದರ್ಯ ಪತಿ ಅಶ್ವಿನ್ ರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.
ಚೆನ್ನೈ ಮೂಲಕ ಕೌಟುಂಬಿಕ ನ್ಯಾಯಾಲಯ ವಿಚಾರಣೆಯನ್ನು ಅಂತಿಮಗೊಳಿಸಿ ತೀರ್ಪು ನೀಡಿದೆ. ಕಳೆದ 7 ತಿಂಗಳಿಂದ ಸೌಂದರ್ಯ ಮತ್ತು ಅಶ್ವಿನ್ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಮತ್ತೆ ಒಂದಾಗಲು ಇಬ್ಬರು ನಿರಾಕರಿಸಿದ ಕಾರಣ ನ್ಯಾಯಾಲಯ ವಿಚ್ಛೇದನ ನೀಡಿದೆ.
ಪರಸ್ಪರ ಒಪ್ಪಿಗೆ ಮೇರೆಗೆ ಸೌಂದರ್ಯ ಮತ್ತು ಅಶ್ವಿನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ತಮ್ಮ ಎರಡು ವರ್ಷದ ಮಗ ಯಾರ ಬಳಿ ಇರಬೇಕು ಎಂಬುದರ ಬಗ್ಗೆ ನ್ಯಾಯಾಲಯ ತೀರ್ಪು ನೀಡಿಲ್ಲ.
ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ ಚೆನ್ನೈ ಮೂಲದ ಉದ್ಯಮಿ ಅಶ್ವಿನ್ ಜೊತೆ 2010 ರಲ್ಲಿ ವಿವಾಹವಾಗಿದ್ದರು. 2016ರ ಸೆಪ್ಟಂಬರ್ ನಲ್ಲಿ ಪತಿಗೆ ವಿಚ್ಛೇದನ ನೀಡುತ್ತಿರುವುದಾಗಿ ಟ್ವಿಟ್ಟರ್ ನಲ್ಲಿ ಸೌಂದರ್ಯ ತಿಳಿಸಿದ್ದರು.