ಟಗರು ಸೆಟ್ ನಲ್ಲಿ ಭಾವನಾ-ಶಿವಣ್ಣ

ಇತ್ತೀಚೆಗೆ ತಮ್ಮ ಸಿನಿಮಾ ಕೆಲಸವನ್ನು ಮತ್ತೆ ಆರಂಭಿಸಿರುವ ನಟ ಶಿವರಾಜ್ ಕುಮಾರ್ ಲೀಡರ್ ಚಿತ್ರಕ್ಕೆ....
ಭಾವನಾ-ಶಿವಣ್ಣ
ಭಾವನಾ-ಶಿವಣ್ಣ
Updated on: 
ಇತ್ತೀಚೆಗೆ ತಮ್ಮ ಸಿನಿಮಾ ಕೆಲಸವನ್ನು ಮತ್ತೆ ಆರಂಭಿಸಿರುವ ನಟ ಶಿವರಾಜ್ ಕುಮಾರ್ ಲೀಡರ್ ಚಿತ್ರಕ್ಕೆ ತಮ್ಮ  ಭಾಗದ ಚಿತ್ರೀಕರಣವನ್ನು ಮುಗಿಸಿ ಇದೀಗ ಟಗರು ಚಿತ್ರತಂಡ ಸೇರಿದ್ದಾರೆ. ಅವರ ಜೊತೆ ನಟಿ ಭಾವನಾ ಕೂಡ ಜೊತೆಯಾಗಿದ್ದಾರೆ.
ಮುಖ್ಯ ಪಾತ್ರದಲ್ಲಿ ಇವರಿಬ್ಬರೂ ಭಾಗವಹಿಸಿರುವ ಚಿತ್ರದ ಸ್ಟಿಲ್ ಸಿಟಿ ಎಕ್ಸ್ ಪ್ರೆಸ್ ಗೆ ಸಿಕ್ಕಿದೆ. ಈ ಶೆಡ್ಯೂಲ್ ನಲ್ಲಿ ನಿರ್ದೇಶಕ ಸೂರಿಯವರು ಭಾವನಾ ಮತ್ತು ಶಿವಣ್ಣ ನಡುವಿನ ದೃಶ್ಯಗಳನ್ನು ಮತ್ತು ಅವರಿಬ್ಬರೊಂದಿಗೆ ಇತರ ನಟರ ನಡುವಿನ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ.
ಮುಂದಿನ 20 ದಿನಗಳವರೆಗೆ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಆ ನಂತರ ಚಿತ್ರತಂಡ ಗೋವಾಕ್ಕೆ ತೆರಳಲಿದ್ದು ಕೊನೆ ಹಂತದ ಶೂಟಿಂಗ್ ಮಾಡಲಿದೆ. ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಭಾವನಾರದ್ದು ಕನ್ನಡದಲ್ಲಿ ಇದು ಆರನೇ ಚಿತ್ರ.
ಚಿತ್ರದಲ್ಲಿ ಧನಂಜಯ, ಮಾನ್ವಿತಾ ಹರೀಶ್ ಮತ್ತು ವಶಿಷ್ಟ ಸಿಂಹ ಕೂಡ ಬಣ್ಣ ಹಚ್ಚಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com