ರಾಜಕೀಯದತ್ತ ನಾಗಾರ್ಜುನ ಚಿತ್ತ: ವೈಎಸ್ ಆರ್ ಕಾಂಗ್ರೆಸ್ ಜೊತೆ ನಿಕಟ ಸಂಪರ್ಕ

ನಟ, ನಿರ್ಮಾಪಕ, ಅಕ್ಕಿನೇನಿ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಮಾತುಗಳು ಟಾಲಿವುಡ್ ನಲ್ಲಿ ಹರಿದಾಡುತ್ತಿವೆ...
ನಾಗಾರ್ಜುನ
ನಾಗಾರ್ಜುನ
Updated on: 
ಹೈದರಾಬಾದ್: ನಟ, ನಿರ್ಮಾಪಕ, ಅಕ್ಕಿನೇನಿ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಮಾತುಗಳು ಟಾಲಿವುಡ್ ನಲ್ಲಿ ಹರಿದಾಡುತ್ತಿವೆ.
ವೈ.ಎಸ್ ರಾಜಶೇಖರ ರೆಡ್ಡಿ ಪುತ್ರ ಹಾಗೂ ವೈ ಎಸ್ ಆರ್ ಕಾಂಗ್ರೆಸ್ ಸಂಸ್ಥಾಪಕ ಜಗಮೋಹನ್ ರೆಡ್ಡಿ ಜೊತೆ ನಾಗಾರ್ಜುನ ನಿಕಟ ಸಂಪರ್ಕ ಹೊಂದಿದ್ದು, ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಗರ್ಜುನ್ ಮತ್ತು ಜಗಮೋಹನ್ ಉದ್ಯಮಿಗಳಾದ ನಿಮ್ಮಗಡ್ಡ ಪ್ರಸಾದ್ ಮತ್ತು ಪ್ರಸಾದ್ ವಿ ಪೊಟ್ಲುರ್ ಅವರಿಗೆ ಅತ್ಯಂತ ಆತ್ಮೀಯರಾಗಿರುವುದು ಟಾಲಿವುಡ್ ನಲ್ಲಿ ಈ ಸುದ್ದಿ ಹರಿದಾಡಲು ಒಂದು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಶೇಖರ ರೆಡ್ಡಿ ಸಿಎಂ ಆಗಿದ್ದ ವೇಳೆ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ನಾಗಾರ್ಜುನ್ ಪ್ರಶಂಸಿದ್ದರು.
ಒಂದು ವೇಳೆ ನಾಗಾರ್ಜುನ ರಾಜಕೀಯಕ್ಕೆ ಸೇರಲು ಬಯಸಿದರೇ ವೈಎಸ್ ಆರ್ ಕಾಂಗ್ರೆಸ್ ಒಂದು ಆಯ್ಕೆಯಾಗಿದೆ. ಏಕೆಂದರೆ ಟಿಡಿಪಿಯಲ್ಲಿ ಈಗಾಗಲೇ ಎನ್ ಟಿ ರಾಮರಾವ್ ಪುತ್ರ ಹಾಗೂ ಚಿತ್ರನಟ ಎನ್. ಬಾಲಕೃಷ್ಣ ಮಹತ್ವದ ಸ್ಥಾನ ಪಡೆದುಕೊಂಡಿದ್ದಾರೆ. 
2019ರ ಚುನಾವಣೆಯ ಸ್ಟಾರ್ ಪ್ರಚಾರಕಿಯಾಗಿ ವೈಎಸ್ ಆರ್ ಸಿ ನಟಿ ರೋಜಾ ಅವರನ್ನು ನೇಮಿಸಿದೆ. ಇನ್ನೂ ಪವನ್ ಕಲ್ಯಾಣ್ ಕೂಡ ತಮ್ಮ ಜನಸೇನಾ ಪಕ್ಷದಿಂದ ಸ್ಪರ್ದಿಸಲಿದ್ದಾರೆ.
ನಾಗಾರ್ಜುನ ಪಕ್ಷ ಸೇರುವ ವಿಷಯವನ್ನು ವೈಎಸ್ ಆರ್ ಸಿ ಕಾಂಗ್ರೆಸ್ ನಿರಾಕರಿಸಿದೆ. ನಾಗಾರ್ಜುನ ಪತ್ನಿ ಅಮಲಾ ಪ್ರಾಣಿ ದಯಾಸಂಘದ ಕಾರ್ಯಕರ್ತೆ, ಆಕೆಯನ್ನು ಟಿಟಿಟಿ ಮಂಡಳಿ ಸದಸ್ಯೆಯನ್ನಾಗಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com