ಸುದೀಪ್
ಸಿನಿಮಾ ಸುದ್ದಿ
ವಾರಸ್ದಾರ ಧಾರಾವಾಹಿ: ನಟ-ನಿರ್ಮಾಪಕ ಕಿಚ್ಚ ಸುದೀಪ್ ವಿರುದ್ಧ ದೂರು?
ನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲಾಗಿದೆ. ವಾರಸ್ದಾರ ಧಾರಾವಾಹಿ ಶೂಟಿಂಗ್ ಗಾಗಿ ಮನೆ ಬಾಡಿಗೆ ಪಡೆದಿದ್ದ ಕಿಚ್ಚ ಕ್ರಿಯೇಷನ್ಸ್...
ಚಿಕ್ಕಮಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲಾಗಿದೆ.
ವಾರಸ್ದಾರ ಧಾರಾವಾಹಿ ಶೂಟಿಂಗ್ ಗಾಗಿ ಮನೆ ಬಾಡಿಗೆ ಪಡೆದಿದ್ದ ಕಿಚ್ಚ ಕ್ರಿಯೇಷನ್ಸ್ ಹಣ ನೀಡಿಲ್ಲ ಎಂದು ಮನೆಯ ಮಾಲೀಕ ದೀಪಕ್ ಎಂಬುವರು ದೂರು ದಾಖಲಿಸಿದ್ಗಾರೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರಿನ ಬೈಗೂರು ಗ್ರಾಮದಲ್ಲಿರುವ ದೀಪಕ್ ಅವರ ಫಾರ್ಮ್ ಹೌಸ್ ಅನ್ನು ವಾರಸ್ಧಾರ ಶೂಟಿಂಗ್ ಗಾಗಿ 3 ತಿಂಗಳ ಕಾಲ ಬಾಡಿಗೆಗೆ ಪಡೆಯಲಾಗಿತ್ತು. ಅಗ್ರಿಮೆಂಟ್ ಪ್ರಕಾರ ದಿನಕ್ಕೆ 6 ಸಾವಿರ ರು ನಂತೆ 2 ತಿಂಗಳಿಗೆ 1ಲಕ್ಷದ 50 ಸಾವಿರ ರು. ನೀಡಬೇಕಿತ್ತು, ಮತ್ತೆ 3 ವರ್ಷ ಶೂಟಿಂಗ್ ಮುಂದುವರಿಸುವುದಾಗಿ ಹೇಳಿದ್ದ ತಂಡ ಬೆಂಗಳೂರಿಗೆ ಹೋಗಿ ವಾಪಸ್ ಬರಲೇ ಇಲ್ಲ, ಮನೆಯಲ್ಲಿ ಹಲವು ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಮನೆಯ ಮುಂದಿನ ಮರಕ್ಕೂ ಹಾನಿ ಮಾಡಿದ್ದಾರೆ ಎಂದು ದೀಪಕ್ ದೂರು ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಸಂಬಂಧ ದೀಪಕ್ ಖಾಸಗಿ ಚಾನೆಲ್ ಹಾಗೂ ಧಾರವಾಹಿಯ ಕಾರ್ಯಕಾರಿ ನಿರ್ಮಾಪಕ ಮಹೇಶ್ ಅವರಿಗೂ ವಕೀಲರ ಮೂಲಕ ನೋಟೀಸ್ ನೀಡಿದ್ದಾರೆ. ಹಣ ನೀಡುವಂತೆ ಎಷ್ಟು ಸಲ ಕೇಳಿದರೂ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ