ಚೆನ್ನೈ: ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಮಲಯಾಳಂ ನಟಿಯ ಹೆಸರನ್ನು ಬಹಿರಂಗಪಡಿಸಿದ ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಲಲಿತಾ ಕುಮಾರಮಂಗಲಂ ಅವರು ಶುಕ್ರವಾರ ಹೇಳಿದ್ದಾರೆ.
ಕಮಲ್ ಹಾಸನ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಶೀಘ್ರದಲ್ಲೇ ನೋಟಿಸ್ ಜಾರಿ ಮಾಡುವುದಾಗಿ ಕುಮಾರಮಂಗಲಂ ಅವರು ತಿಳಿಸಿದ್ದಾರೆ.
ಕಮಲ್ ಹಾಸನ್ ಅವರು ಇತ್ತೀಚಿಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಲೆಯಾಳಂ ನಟಿಯ ಹೆಸರು ಬಹಿರಂಗಪಡಿಸಿದ್ದರು. ಅಲ್ಲದೆ ಸಂತ್ರಸ್ತೆ ಹೆಸರನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಜನರಿಗೆ ಸಂತ್ರಸ್ತೆಯ ಹೆಸರು ತಿಳಿಯಬೇಕಿದೆ ಎಂದು ಹೇಳಿದ್ದರು.
ಕೇವಲ ಚಿತ್ರರಂಗದ ಮಹಿಳೆಯರಿಗೆ ಅಷ್ಟೇ ಅಲ್ಲ ಜನರ ಗುಂಪಿನಲ್ಲಿರುವ ಮಹಿಳೆಯರೂ ಕೂಡ ಸುರಕ್ಷತೆ ಬೇಕು. ನನಗೆ ಅವರು ಮುಖ್ಯವಾಗುತ್ತಾರೆ. ಅವರಿಗೆ ಯಾವುದೇ ಸಮಸ್ಯೆಯಾಗಲು ನಾನು ಬಿಡುವುದಿಲ್ಲ ಎಂದಿದ್ದರು.