ಡ್ರಗ್ ಮಾಫಿಯಾ: ತೆಲುಗು ನಟ ರವಿತೇಜ, ನಟಿ ಚಾರ್ಮೀ ಕೌರ್, ಪುರಿ ಜಗನ್ನಾಥ್'ಗೆ ನೋಟಿಸ್?
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಕ್ಕಳಿಕೆ ಮಾದಕ ವಸ್ತು ಪೂರೈಸುವ ದೊಡ್ಡ ಜಾಲವೊಂದು ಬೇರೂರಿವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಈ ಪ್ರಕರಣದ ಜೊತೆಗೆ ತೆಲುಗಿನ ಹಲವು ಖ್ಯಾತ ನಟ, ನಟಿ ಹಾಗೂ ನಿರ್ದೇಶಕರ ಹೆಸರುಗಳು ಕೇಳಿಬರತೊಡಗಿವೆ...
ತೆಲುಗಿನ ಖ್ಯಾತ ನಟ ರವಿತೇಜ, ನಿರ್ದೇಶಕ ಪುರಿ ಜಗನ್ನಾಥ, ನಟಿ ಚಾರ್ಮಿ ಕೌರ್
ಹೈದರಾಬಾದ್: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಕ್ಕಳಿಕೆ ಮಾದಕ ವಸ್ತು ಪೂರೈಸುವ ದೊಡ್ಡ ಜಾಲವೊಂದು ಬೇರೂರಿವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಈ ಪ್ರಕರಣದ ಜೊತೆಗೆ ತೆಲುಗಿನ ಹಲವು ಖ್ಯಾತ ನಟ, ನಟಿ ಹಾಗೂ ನಿರ್ದೇಶಕರ ಹೆಸರುಗಳು ಕೇಳಿಬರತೊಡಗಿವೆ.
ಇತ್ತೀಚಿಗೆ ಬೆಳಕಿಗೆ ಬಂದ ಮಾದಕ ವಸ್ತು ಜಾಲ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ತೆಲುಗಿನ ಖ್ಯಾತ ನಟ ರವಿತೇಜ, ನಿರ್ದೇಶಕ ಪುರಿ ಜಗನ್ನಾಥ, ನಟಿ ಚಾರ್ಮಿ ಕೌರ್ ಸೇರಿದಂತೆ ಒಟ್ಟು 12 ಜನರಿಗೆ ತೆಲಂಗಾಣ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜು.4 ರಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾದಕ ವಸ್ತು ಮಾರಾಟದ ದೊಡ್ಡ ಜಾಲವೊಂದನ್ನು ಭೇಧಿಸಿ, 12 ಜನರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಇವರು ನೀಡಿದ ಮಾಹಿತಿ ಮತ್ತು ಪ್ರಮುಖ ಆರೋಪಿಯೊಬ್ಬನ ಮೊಬೈಲ್ ನಲ್ಲಿ ನಟ ಹಾಗೂ ನಟಿಯರ ಮೊಬೈಲ್ ನಂಬರ್ ಪತ್ತೆಯಾದ ಹಿನ್ನಲೆಯಲ್ಲಿ ಎಲ್ಲರನ್ನೂವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.