ಕುರುಕ್ಷೇತ್ರಕ್ಕೆ ಕೊನೆಗೂ ಸಿಕ್ಕ ಭೀಮ ಪಾತ್ರಧಾರಿ: ದರ್ಶನ್ ಕಣ್ಣಿಗೆ ಬಿದ್ದ ಡ್ಯಾನಿಶ್ ಅಖ್ತರ್

ಮುನಿರತ್ನ ಮತ್ತು ಜಯಶ್ರೀದೇವಿ ನಿರ್ಮಾಣದ ಮೆಗಾ ಸಿನಿಮಾ ಕುರುಕ್ಷೇತ್ರದ ಭೀಮನ ಪಾತ್ರಕ್ಕೆ ಕೊನೆಗೂ...
ದರ್ಶನ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ
ದರ್ಶನ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ
ಬೆಂಗಳೂರು: ಮುನಿರತ್ನ ಮತ್ತು ಜಯಶ್ರೀದೇವಿ ನಿರ್ಮಾಣದ ಮೆಗಾ ಸಿನಿಮಾ ಕುರುಕ್ಷೇತ್ರದ ಭೀಮನ ಪಾತ್ರಕ್ಕೆ ಕೊನೆಗೂ ನಟನೊಬ್ಬ ಸಿಕ್ಕಿದ್ದಾನೆ.
ಆರು ಅಡಿ, ಆರು ಇಂಚು ಎತ್ತರವಿರುವ ಡ್ಯಾನಿಶ್ ಅಖ್ತರ್ ಸೈಫಿ ಎಂಬ ಕುಸ್ತಿ ಪಟು ಭೀಮಮ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ದರ್ಶನ್ 50ನೇ ಸಿನಿಮಾವಾಗಿರುವ ಕುರುಕ್ಷೇತ್ರಕ್ಕೆ ಈಗಾಗಲೇ ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್, ದ್ರೌಪದಿ ಪಾತ್ರದಲ್ಲಿ ಸ್ನೇಹ, ಲಕ್ಷ್ಮಿ, ರೆಜಿನಾ ಕಾಸ್ಸಂದ್ರ, ಮತ್ತು ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಡ್ಯಾನಿಶ್ ಅಖ್ತರ್ ಕುರುಕ್ಷೇತ್ರ ಸಿನಿಮಾ ತಂಡಕ್ಕೆ ಹೊಸ ಸೇರ್ಪಡೆ.
ನಿಖಿಲ್ ಸಿನ್ಹಾ ನಿರ್ದೇಶನದ ಸಿಯಾ ಕೆ ಧಾರಾವಾಹಿಯಲ್ಲಿ  ಡ್ಯಾನಿಶ್ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿರುವುದಕ್ಕೆ ಡ್ಯಾನಿಶ್ ತುಂಬಾ ಎಕ್ಸೈಟ್ ಆಗಿದ್ದಾರೆ.
ಕುರುಕ್ಷೇತ್ರದಲ್ಲಿ ಭೀಮನ ಪಾತ್ರದಲ್ಲಿ ನಟಿಸಲು ಡ್ಯಾನಿಶ್ ಅಖ್ತರ್ ಗೆ ದರ್ಶನ್ ಅವಕಾಶ ಕೊಡಿಸಿದ್ದಾರೆ. ರಾಮಾಯಣದ ಹನುಮಂತ, ಮಹಾಭಾರತದ ಭೀಮನ ಪಾತ್ರದಲ್ಲಿ ನಟನೆ ನನ್ನಲ್ಲಿ ಉತ್ಸಾಹ ಮೂಡಿಸಿದೆ ಎಂದು ಹೇಳಿರುವ ಡ್ಯಾನಿಶ್,ಸದ್ಯ ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಮಹಾಕಾಳಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ದರ್ಶನ್ ಇಷ್ಟು ದೊಡ್ಡ ಪ್ರಾಜೆಕ್ಟ್ ನಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿದ್ದಾರೆ, ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಡ್ಯಾನಿಶ್ ಹೇಳಿದ್ದಾರೆ.
ಹೈದರಾಬಾದ್ ನ ಜಿಮ್ ವೊಂದರಲ್ಲಿ ದರ್ಶನ್ ನನ್ನನ್ನು ನೋಡಿದರು. ನಾನು ಹನುಮಾನ್ ಪಾತ್ರದಲ್ಲಿ ನಟಿಸುತ್ತಿರುವುದು ಅವಿರಿಗೆ ಗೊತ್ತಿತ್ತು. ನಾವು ಅದೇ ಸ್ಥಳದಲ್ಲಿ ಶೂಟಿಂಗ್ ಗಾಗಿ ಲೊಕೇಶ್ ಪರೀಕ್ಷಿಸುತ್ತಿದ್ದೆವು, ಅವರು ಕೂಡ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು, ಪ್ರೊಡಕ್ಷನ್ ತಂಡಕ್ಕೆ ನನ್ನ ಬಗ್ಗೆ ಅವರು ಹೇಳಿದರು. ಸಿನಿಮಾ ತಂಡ ನನಗೆ ಕರೆ ಮಾಡಿತ್ತು, ಎರಡನೇ ಮಾತಿಲ್ಲದೇ ನಾನು ಒಪ್ಪಿಕೊಂಡೆ ಎಂದು ಡ್ಯಾನಿಶ್ ಅಖ್ತರ್ ವಿವರಿಸಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಡ್ಯಾನಿಶ್ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com