ನಟಿ ಮೇಘನಾ ರಾಜ್ ಅವರ ಜಿಂದಾ ಚಿತ್ರದಲ್ಲಿನ ಡೈಲಾಗ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಜಿಂದಾ ಚಿತ್ರದಲ್ಲಿ ಮೇಘನಾ ರಾಜ್ ಈ ಗಂಡು ಅನ್ನೊ ಒಬ್ಬ ಕಚಡ ನನ್ನ ಮಗಾನು ಪ್ರೀತಿ ಮಾಡೋವಾಗ ಸತ್ಯ ಹೇಳಲ್ವಲ್ಲ...ಅಂತಾ ಡೈಲಾಗ್ ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಜಿಂದಾ ಚಿತ್ರ ಇದೇ ಜೂನ್ 9ರಂದು ರಾಜ್ಯಾದ್ಯಂತ ಬೆಳ್ಳಿ ಪರದೆ ಮೇಲೆ ಅಬ್ಬರಿಸಲು ಅಣಿಯಾಗಿದೆ. ಈ ಮಧ್ಯೆ ಚಿತ್ರದಲ್ಲಿನ ಡೈಲಾಗ್ ಕುರಿತಂತೆ ವಿವಿಧ ಸಂಘಟನೆಗಳು ಮೇಘನಾ ರಾಜ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದು ಕ್ಷಮೆಯಾಚಿಸುವಂತೆ ಕೇಳುತ್ತಿದ್ದಾರೆ.
ಚಿತ್ರವನ್ನು ನಿರ್ದೇಶಕ ಮುಸ್ಸಂಜೆ ಮಹೇಶ್ ನಿರ್ದೇಶಿಸಿದ್ದಾರೆ. ಮೇಘನಾ ರಾಜ್, ಯುವರಾಜ್, ದೇವರಾಜ್, ಅರುಣ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.