ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಜೀವನ ಕುರಿತು ಸಿನಿಮಾ ನಿರ್ಮಾಣವಾಗುತ್ತಿದ್ದು, ಬಾಲಿವುಡ್ ನಟ, ಪ್ರಧಾನಿ ಮೋದಿ ಅಭಿಮಾನಿ ಅನುಪಮ್ ಕೇರ್ ...
ಅನುಪಮ್ ಖೇರ್
ಅನುಪಮ್ ಖೇರ್
Updated on
ಮುಂಬೈ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಜೀವನ ಕುರಿತು ಸಿನಿಮಾ ನಿರ್ಮಾಣವಾಗುತ್ತಿದ್ದು, ಬಾಲಿವುಡ್ ನಟ, ಪ್ರಧಾನಿ ಮೋದಿ ಅಭಿಮಾನಿ ಅನುಪಮ್ ಕೇರ್ ಮನಮೋಹನ್ ಸಿಂಗ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
ಮನಮೋಹನ್ ಸಿಂಗ್ ಅವರ ಸಲಹೆಗಾರರಾಗಿದ್ದ ಸಂಜಯ್ ಬಾರೂ  ಬರೆದಿರುವ' ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಪುಸ್ತಕದ ಕತೆ ಆಧರಿಸಿ ಸಿನಿಮಾ ತಯಾರಾಗುತ್ತಿದೆ. 
ಹನ್ಸಲ್ ಮೆಹತಾ ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ವಿಜಯ್ ರತ್ನಾಕರ್ ಗುತ್ತೆ ನಿರ್ದೇಶಿಸುತ್ತಿದ್ದಾರೆ. ಸುನೀಲ್ ಬೋಹ್ರಾ ತಮ್ಮ ಹೋಮ್ ಬ್ಯಾನರ್ ಅಡಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಸಿಂಗ್ ಪಾತ್ರಕ್ಕೆ ಅನುಪಮ್ ಕೇರ್ ಅವರನ್ನು ಆಯ್ಕೆ ಮಾಡಲಾಗಿದ್ದು ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ಇನ್ನೂ ಬಾಕಿ ಉಳಿದಿದೆ.
ಮನಮೋಹನ್ ಸಿಂಗ್ ಆಡಳಿತದಲ್ಲಿ ನಡೆದ ಕೆಲಸಗಳ ಬಗ್ಗೆ ಚಿತ್ರ ತಯಾರಾಗುತ್ತಿದೆ. ಟರ್ಬನ್ ಧರಿಸಿರುವ ಅನುಪಮ್ ಕೇರ್ ಥೇಟ್ ಮನಮೋಹನ್ ಸಿಂಗ್ ರಂತೆ ಕಾಣುತ್ತಾರೆ. ಬ್ಯಾಕ್ ಗ್ರೌಂಡ್ ನಲ್ಲಿ ಸೀರೆ ಉಟ್ಟ ಮಹಿಳೆಯೊಬ್ಬರು ಕಾಣುತ್ತಿದ್ದು, ಈ ಚಿತ್ರ ಸೋನಿಯಾ ಗಾಂಧಿ ಅವರನ್ನು ಪ್ರತಿನಿಧಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com