ಇಂಡೊ-ಟಿಬೆಟ್ ಗಡಿ ಪೊಲೀಸ್ ಪಡೆಗೆ ದೇಶಭಕ್ತಿ ಗೀತೆ ಹಾಡಿದ ಸೋನು ನಿಗಮ್

ಇಂಡೊ-ಟಿಬೆಟ್ ಗಡಿ ಪೊಲೀಸ್ ಪಡೆಯ(ಐಟಿಬಿಪಿ) ಗೌರವಾರ್ಥ ಬಾಲಿವುಡ್ ಹಿನ್ನಲೆ ಗಾಯಕ ಸೋನು ನಿಗಮ್...
ಸೋನು ನಿಗಮ್
ಸೋನು ನಿಗಮ್
ನವದೆಹಲಿ: ಇಂಡೊ-ಟಿಬೆಟ್ ಗಡಿ ಪೊಲೀಸ್ ಪಡೆಯ(ಐಟಿಬಿಪಿ) ಗೌರವಾರ್ಥ ಬಾಲಿವುಡ್ ಹಿನ್ನಲೆ ಗಾಯಕ ಸೋನು ನಿಗಮ್ ದೇಶಭಕ್ತಿ ಗೀತೆಯೊಂದನ್ನು ಹಾಡಿದ್ದಾರೆ.
2.17 ನಿಮಿಷಗಳ ಕಾಲ ಹಿಂದಿ ಭಾಷೆಯಲ್ಲಿರುವ ಹಾಡನ್ನು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಬಿಡುಗಡೆ ಮಾಡಿದರು. ಪೊಲೀಸ್ ಪಡೆಯ ಕೇಂದ್ರ ಕಚೇರಿಯನ್ನು ಅವರು ಭೇಟಿ ಮಾಡಿದರು. 
ಈ ಹಾಡನ್ನು ಕೆಲ ವರ್ಷಗಳ ಹಿಂದೆ ಬರೆಯಲಾಗಿದ್ದು ಅದನ್ನು ಈಗ ತಿದ್ದುಪಡಿ ಮಾಡಿ ಬಿಡುಗಡೆ ಮಾಡಲಾಗಿದೆ.
90,000 ಸಿಬ್ಬಂದಿಗಳನ್ನು ಹೊಂದಿರುವ ಅರೆ ಸೇನಾಪಡೆಗೆ ಹಾಡುವಂತೆ ಸೋನು ನಿಗಮ್ ಅವರನ್ನು ಸಂಪರ್ಕಿಸಲಾಗಿತ್ತು. ಅದಕ್ಕೆ ಅವರು ಯಾವುದೇ ಶುಲ್ಕ ತೆಗೆದುಕೊಳ್ಳದೆ ಹಾಡಿದ್ದಾರೆ. ಪೊಲೀಸ್ ಪಡೆಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಮುಂಬೈಯಲ್ಲಿ ಗಾಯಕನನ್ನು ಭೇಟಿ ಮಾಡಿ ಹಾಡನ್ನು ರೆಕಾರ್ಡ್ ಮಾಡಿಕೊಂಡಿದ್ದರು.
ಹಿಮವೀರ್ ಎಂದು ಹೆಮ್ಮೆಯಿಂದ ಕರೆದುಕೊಳ್ಳುವ  ಇಂಡೊ ಟಿಬೆಟ್ ಪೊಲೀಸ್ ಪಡೆಯ ಪುರುಷ ಮತ್ತು ಮಹಿಳಾ ಸಿಬ್ಬಂದಿ ಬಗ್ಗೆ ಹಿನ್ನಲೆಯಲ್ಲಿ ಮಿಲಿಟರಿ ಬೀಟ್ ಗಳನ್ನು ಹೊಂದಿ ಹಾಡಲಾಗಿದೆ. ಐಟಿಬಿಪಿಯ ಗಡಿ ಪೋಸ್ಟ್, ಅದರ ಸಿಬ್ಬಂದಿ ಮತ್ತು ಅವರ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮಿಲಿಟರಿ ಪಡೆ ಸಿಬ್ಬಂದಿಯ ಕೆಲಸಗಳ ಬಗ್ಗೆ ವಿಡಿಯೊದಲ್ಲಿ ವರ್ಣಿಸಲಾಗಿದೆ.
ಇಂಡೊ ಟಿಬೆಟನ್ ಗಡಿ ಭದ್ರತಾ ಪಡೆ ಕೇಂದ್ರ ಗೃಹ ಸಚಿವಾಲಯದ ಕೆಳಗೆ ಕೆಲಸ ಮಾಡುತ್ತಿದ್ದು, 3,488 ಕಿಲೋ ಮೀಟರ್ ಉದ್ದದ ಚೀನಾ-ಭಾರತ ಗಡಿನಾಡು ಮತ್ತು ಇದರ ಗಡಿ ಪೋಸ್ಟ್ ಗಳನ್ನು ಕಾಯುವ ಕೆಲಸ ಮಾಡುತ್ತಿದೆ. ಚೀನೀ ಆಕ್ರಮಣಶೀಲತೆ ನಂತರ, 1962 ಪಡೆಯನ್ನು ಬೆಳೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com