'ಹೆಬ್ಬುಲಿ' ನಂತರ ಮತ್ತೆ ಒಗ್ಗೂಡಿದ ಕಿಚ್ಚ-ಕೃಷ್ಣ ಜೋಡಿ

'ಹೆಬ್ಬುಲಿ' ಸಿನೆಮಾದ ಯಶಸ್ಸು ನಟ ಸುದೀಪ್ ಮತ್ತು ನಿರ್ದೇಶಕ ಎಸ್ ಕೃಷ್ಣ ಮತ್ತೆ ಒಗ್ಗೂಡುವಂತೆ ಮಾಡಿದೆ. ಈ ಸುದ್ದಿಯನ್ನು ಧೃಢೀಕರಿಸುವ ನಿರ್ದೇಶಕ "ನನ್ನ ಮುಂದಿನ ಸಿನೆಮಾ ಮತ್ತೆ @ಕಿಚ್ಚಸುದೀಪ ಸರ್
ನಟ ಸುದೀಪ್
ನಟ ಸುದೀಪ್
Updated on
ಬೆಂಗಳೂರು: 'ಹೆಬ್ಬುಲಿ' ಸಿನೆಮಾದ ಯಶಸ್ಸು ನಟ ಸುದೀಪ್ ಮತ್ತು ನಿರ್ದೇಶಕ ಎಸ್ ಕೃಷ್ಣ ಮತ್ತೆ ಒಗ್ಗೂಡುವಂತೆ ಮಾಡಿದೆ. ಈ ಸುದ್ದಿಯನ್ನು ಧೃಢೀಕರಿಸುವ ನಿರ್ದೇಶಕ "ನನ್ನ ಮುಂದಿನ ಸಿನೆಮಾ ಮತ್ತೆ  @ಕಿಚ್ಚಸುದೀಪ ಸರ್ ಅವರೊಂದಿಗೆ. ಸ್ಕ್ರಿಪ್ಟ್ ಕೆಲಸ ಜಾರಿಯಲ್ಲಿದೆ. ಅದು ಮುಗಿದ ನಂತರ ಅಧಿಕೃತ ಘೋಷಣೆ ಮಾಡುವೆ" ಎಂದು ಟ್ವೀಟ್ ಮಾಡಿದ್ದಾರೆ. 
ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ 'ಹೆಬ್ಬುಲಿ' ೨೫ನೇ ದಿನದತ್ತ ದಾಪುಗಾಲು ಹಾಕಿದೆ. ನಿರ್ಮಾಪಕ ಉಮಾಪತಿ ಮತ್ತು ನಿರ್ದೇಶಕರ ಜೊತೆಗೆ ಪ್ರಚಾರ ಸಭೆಗಳಿಗೆ ತೆರಳಿದ್ದ ಸುದೀಪ್, ಅಭಿಮಾನಿಗಳಿಂದ ಸಿನೆಮಾ ಬಗ್ಗೆ ಒಳ್ಳೆಯ ಅಭಿಪಾಯಗಳನ್ನು ಪಡೆಯುತ್ತಿರುವುದಕ್ಕೆ ಸಂತಸಗೊಂಡಿದ್ದಾರೆ. ಆದುದರಿಂದ ಅವರೇ ಕೃಷ್ಣ ಅವರಿಗೆ ನೂತನ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಲು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. 
ಈಮಧ್ಯೆ ನಟ ತಮ್ಮ ಮುಂದಿನ ಸಿನೆಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ಪ್ರೇಮ್ ನಿರ್ದೇಶನದ 'ದ ವಿಲನ್' ನಲ್ಲಿ ಶಿವರಾಜ್ ಕುಮಾರ್ ಎದುರು ನಟಿಸಲಿದ್ದಾರೆ. ನಂತರ ರಕ್ಷಿತ್ ಶೆಟ್ಟಿ ನಿರ್ದೇಶನದ 'ಥಗ್ಸ್ ಆಫ್ ಮಾಲ್ಗುಡಿ'ಯಲ್ಲಿ ತೊಡಗಿಸಿಕೊಂಡು ನಂತರ ರಿಷಬ್ ಶೆಟ್ಟಿ ಅವರ ಮತ್ತೊಂದು ಯೋಜನೆಯಲ್ಲಿ ನಟಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com