ಸಿದ್ದರಾಮಯ್ಯ
ಸಿನಿಮಾ ಸುದ್ದಿ
ನಿರ್ದೇಶಕ ಎ.ಟಿ ರಘು ಚಿಕಿತ್ಸೆಗೆ 5 ಲಕ್ಷ ರು. ನೆರವು ನೀಡಿದ ರಾಜ್ಯ ಸರ್ಕಾರ
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎ.ಟಿ ರಘು ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಐದು ಲಕ್ಷ ರೂಪಾಯಿಗಳನ್ನು ಚಿಕಿತ್ಸಾ ...
ಬೆಂಗಳೂರು: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎ.ಟಿ ರಘು ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಐದು ಲಕ್ಷ ರೂಪಾಯಿಗಳನ್ನು ಚಿಕಿತ್ಸಾ ವೆಚ್ಚವನ್ನಾಗಿ ನೀಡಿದ್ದಾರೆ.
ಜನಪ್ರಿಯ ನಿರ್ದೇಶಕ ಎ.ಟಿ.ರಘು ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯೂ ಆಗಿತ್ತು. ಈ ಸುದ್ದಿಯನ್ನು ಗಮನಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ರಘು ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದ್ದಾರೆ.
ಈಗಾಗಲೇ ಐದು ಲಕ್ಷ ರೂಪಾಯಿಗಳನ್ನು ಕೊಡುವುದಕ್ಕೆ ತೀರ್ಮಾನಿಸಲಾಗಿದ್ದು, ಅದನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ತಂದು, ರಘು ಅವರ ಸಂಬಂಧಿಕರಿಗೆ ಕೊಡಬೇಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ