ಯಶ್
ಸಿನಿಮಾ ಸುದ್ದಿ
ಮದುವೆ ನಂತರ ಶೂಟಿಂಗ್ ಗೆ ಮರಳಿದ ಯಶ್ : ನಿಗದಿಯಂತೆ ಕೆಜಿಎಫ್ ಸಿನಿಮಾ ಚಿತ್ರೀಕರಣ ಆರಂಭ
ವಿವಾಹದ ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಶೂಟಿಂಗ್ ಗೆ ಹಾಜರಾಗಿದ್ದಾರೆ. ಯಶೋಮಾರ್ಗ ಫೌಂಡೇಶನ್ ನ ...
ಬೆಂಗಳೂರು: ವಿವಾಹದ ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಶೂಟಿಂಗ್ ಗೆ ಹಾಜರಾಗಿದ್ದಾರೆ. ಯಶೋಮಾರ್ಗ ಫೌಂಡೇಶನ್ ನ ಸಾಮಾಜಿಕ ಕೆಲಸ ಕಾರ್ಯಗಳ ನಂತರ ಯಶ್ ನಿಗದಿಯಂತೆ ಕೆಜಿಎಫ್ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.
ಕೆಜಿಎಫ್ ಯಶ್ ಅವರ ನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾವಾಗಿದೆ. ಹೊಂಬಾಳೆ ಫಿಲ್ಮ್ಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕ್ಯಾಪ್ಟನ್ ಪ್ರಶಾಂತ್ ನೀಲ್ ಅವರ ಜೊತೆ ಕೆಜಿಎಫ್ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಕೆಜಿಎಫ್ ಸಿನಿಮಾ ಕ್ರಿಸ್ ಮಸ್ ಗೆ ರಿಲೀಸ್ ಆಗಲಿದೆ ಎಂದು ಬರೆದಿದ್ದಾರೆ.
ಕೆಜಿಎಫ್ ಸಿನಿಮಾ ನಾಯಕನಿಗೆ ಉದ್ದ ಕೂದಲಿನ ಗಡ್ಡ ಹಾಗೂ ಉದ್ದ ಕೂದಲಿನ ಅವಶ್ಯಕತೆಯಿದೆ. ಮೊದಲೆ ನಿಗದಿ ಪಡಿಸಿದ ವೇಳಾ ಪಟ್ಟಿಯಂತೆ ಸಿನಿಮಾ ಶೂಟಿಂಗ್ ಮುಗಿದರೇ ಕ್ರಿಸ್ ಮಸ್ ವೇಳೆಗೆ ಬಿಡುಗಡೆ ಗೊಳ್ಳಲಿದೆ ಎಂದು ಹೇಳಿದ್ದಾರೆ. ಯಶ್ ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ, ಭುವನ್ ಗೌಡ ಸಿನಿಮಾಗೆ ಸಿನಿಮಾಟೋಗ್ರಫಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ