ಬ್ರಿಟನ್ ಮೂಲದ ನಟಿ ಹಾಗೂ ಮಾಡೆಲ್ ಆಮಿ ಜಾಕ್ಸನ್
ಸಿನಿಮಾ ಸುದ್ದಿ
ಆಮಿ ಜಾಕ್ಸನ್ ಗಾಗಿ ಕಾಯುತ್ತಿರುವ 'ದಿ ವಿಲನ್'?
ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ನಿನ ಮಲ್ಟಿ ಸ್ಟಾರ್ ಚಿತ್ರವೆಂದೇ ಖ್ಯಾತಿ ಪಡೆಯುತ್ತಿರುವ ದಿ ವಿಲನ್ ಚಿತ್ರದ ಚಿತ್ರೀಕರಣವನ್ನು ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಲಾಗಿದೆ...
ಬೆಂಗಳೂರು: ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ನಿನ ಮಲ್ಟಿ ಸ್ಟಾರ್ ಚಿತ್ರವೆಂದೇ ಖ್ಯಾತಿ ಪಡೆಯುತ್ತಿರುವ ದಿ ವಿಲನ್ ಚಿತ್ರದ ಚಿತ್ರೀಕರಣವನ್ನು ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಲಾಗಿದೆ.
ಚಿತ್ರದ ಚಿತ್ರೀಕರಣ ಮಾರ್ಚ್ ತಿಂಗಳಿನಲ್ಲಿಯೇ ಆರಂಭವಾಗಬೇಕಿತ್ತು. ಆದರೆ, ಕೆಲ ಕಾರಣಗಳಿಂದಾಗಿ ಚಿತ್ರದ ತಂಡ ಚಿತ್ರೀಕರಣವನ್ನು ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಿದೆ ಎನ್ನಲಾಗಿದೆ. ಇದಕ್ಕೆ ಕಾರಣ ಬ್ರಿಟನ್ ಮೂಲದ ನಟಿ ಹಾಗೂ ಮಾಡೆಲ್ ಆಮಿ ಜಾಕ್ಸನ್ ಎಂದು ಹೇಳಲಾಗುತ್ತಿದೆ.
ಆಮಿ ಜಾಕ್ಸನ್ ಅವರು ರಜನಿಕಾಂತ್ ಅಭಿನಯದ ತಮಿಳು ಚಿತ್ರ 2.0 ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಹೀಗಾಗಿ ಆಮಿ ಜಾಕ್ಸನ್ ಗಾಗಿ 'ದಿ ವಿಲನ್ ಚಿತ್ರ ತಂಡ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಿ.ಆರ್. ಮನೋಹರ್ ನಿರ್ಮಾಣ ಹಾಗೂ ಜೋಗಿ ಖ್ಯಾತಿಯ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರಕ್ಕೆ ಹಲವು ನಟಿಯರ ಹೆಸರುಗಳು ಕೇಳಿಬಂದಿತ್ತು. ಆದರೆ, ಪ್ರೇಮ್ ಅವರು ಅಂತಿಮವಾಗಿ ಬ್ರಿಟೀಷ್ ಮಾಡೆಲ್ ಆಮಿ ಜಾಕ್ಸನ್ ಅವರನ್ನು ಆಯ್ಕೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಪ್ರಸ್ತುತ ಚಿತ್ರದ ತಂಡ ಆಮಿ ಜಾಕ್ಸನ್ ಅವರ ಬರುವಿಕೆಗಾಗಿ ಕಾಯುತ್ತಿದ್ದು, ನಂತರವಷ್ಟೇ ಚಿತ್ರದ ನಾಯಕಿ ಬಗ್ಗೆ ಅಧಿಕೃತವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಲಿಗೆ ಎಂದು ಮೂಲಗಳು ತಿಳಿಸಿವೆ.
ಆಮಿ ಜಾಕ್ಸನ್ ಅವರು ಸುದೀಪ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ನಟಿ ಶ್ರುತಿ ಹರಿಹರನ್ ಅವರೂ ಕೂಡ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದೆ.
ಆಮಿ ಜಾಕ್ಸನ್ ಅವರ ಅಧಿಕೃತ ಟ್ವಿಟರ್ ನಲ್ಲಿರುವ ಮಾಹಿತಿ ಪ್ರಕಾರ, ಪ್ರಸ್ತುತ ನಟಿ ಇಂಗ್ಲೀಷ್ ಚಿತ್ರ ಬೂಗಿ ಮ್ಯಾನ್ ಚಿತ್ರೀಕರಣದಲ್ಲಿ ತೊಡಗಿದ್ದಾರೆಂದು ತಿಳಿದುಬಂದಿದೆ.
ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಕುರಿತಂತೆ ಈವರೆಗೂ ಹಲವು ಅನುಮಾನ ಹಾಗೂ ಊಹಾಪೋಹಗಳೇ ಇದ್ದು, ಚಿತ್ರದ ಚಿತ್ರೀಕರಣ ಆರಂಭವಾದ ಬಳಿಕವಷ್ಟೇ ಸ್ಪಷ್ಟ ಮಾಹಿತಿಗಳು ತಿಳಿದುಬರಲಿದೆ.

