ರಿಮೇಕ್ ಹಕ್ಕು ಉಲ್ಲಂಘನೆ: ಪುಷ್ಪಕ ವಿಮಾನ ಚಿತ್ರದ ವಿರುದ್ದ ಪ್ರಕರಣ ದಾಖಲು

ರಿಮೇಕ್ ಹಕ್ಕು ಉಲ್ಲಂಘನೆ ಮಾಡಿದ ಆರೋಪದ ಮೇಲೆ ನಟ ರಮೇಶ್ ಅವರಿಂದ್ ನಟನೆಯ ನೂರನೇ ಚಿತ್ರ ಪುಷ್ಪಕ ವಿಮಾನ ಸಿನಿಮಾ ವಿರುದ್ಧ ಪ್ರಕರಣವೊಂದು ದಾಖಲಾಗಿದೆ...
ಪುಷ್ಪಕ ವಿಮಾನ
ಪುಷ್ಪಕ ವಿಮಾನ
ಬೆಂಗಳೂರು: ರಿಮೇಕ್ ಹಕ್ಕು ಉಲ್ಲಂಘನೆ ಮಾಡಿದ ಆರೋಪದ ಮೇಲೆ ನಟ ರಮೇಶ್ ಅವರಿಂದ್ ನಟನೆಯ ನೂರನೇ ಚಿತ್ರ ಪುಷ್ಪಕ ವಿಮಾನ ಸಿನಿಮಾ ವಿರುದ್ಧ ಪ್ರಕರಣವೊಂದು ದಾಖಲಾಗಿದೆ. 
ಕೊರಿಯಾ ಸಿನಿಮಾ 'ಮಿರಾಕಲ್ ಇನ್ ಸೆಲ್ ನಂ.7' ಚಿತ್ರದ ಕಥೆ ಕದ್ದಿದ್ದಾರೆಂದು ಆರೋಪಿಸಿ ಕ್ರೋಸ್ ಪಿಕ್ಚರ್ಸ್ ಮತ್ತು ಕ್ರೋಸ್ ಟೆಲಿವಿಷನ್ ಪುಷ್ಪಕ ವಿಮಾನ ಚಿತ್ರ ನಿರ್ಮಾಪಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ. 
ಪುಷ್ಪಕ ವಿಮಾನ ಚಿತ್ರ ರಮೇಶ್ ಅರವಿಂದ್ ಅವರ ನೂರನೇ ಚಿತ್ರವಾಗಿದ್ದು, ನಿರ್ದೇಶಕ ಪವನ್ ಒಡೆಯರ್ ಹಾಗೂ ವಿಖ್ಯಾತ್ ಚಿತ್ರ ಪ್ರೊಡೆಕ್ಷನ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿತ್ತು. 
ಚಿತ್ರ ನಿರ್ದೇಶ ಪವನ್ ಒಡೆಯರ್ ಅವರ ವಿರುದ್ಧ ದಾವೆ ಹೂಡಿರುವ ಕ್ರೋಸ್ ಪಿಕ್ಚರ್ಸ್ ಇಂಡಿಯಾ, ಕನ್ನಡದಲ್ಲಿ ಬಿಡುಗಡೆಯಾಗಿರುವ ಪುಷ್ಪಕ ವಿಮಾನ 2017 ಚಿತ್ರವು ಕೊರಿಯನ್ ಚಿತ್ರ ಮಿರಾಕಲ್ ಇನ್ ಸೆಲ್ ನಂ.7 ದ ರಿಮೇಕ್ ಆಗಿದೆ ಎಂದು ಹೇಳಿದೆ. ಕೊರಿಯನ್ ಮಿರಾಕಲ್ ಇನ್ ಸೆಲ್ ನಂ. 7 ಚಿತ್ರದ ರಿಮೇಕ್ ಹಕ್ಕು ಕ್ರೋಸ್ ಪಿಕ್ಚರ್ಸ್ ಮತ್ತು ಕ್ರೋಸ್ ಟೆಲಿವಿಷನ್ ಇಂಡಿಯಾದ ಸಂಸ್ಥೆಯ ಬಳಿಯೇ ಇವೆ. ಆದರೆ, ಕೊರಿಯನ್ ಚಿತ್ರದ ಆಧಾರದ ಮೇಲೆ ಕನ್ನಡ ಪುಷ್ಪಕ ವಿಮಾನ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. 
ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಎಸ್. ರವಿಂದ್ರನಾಥ್ ಅವರು ಸ್ಪಷ್ಟನೆನೀಡಿದ್ದು, ಪುಷ್ಪಕ ವಿಮಾನ ಚಿತ್ರ ಮಿರಾಕಲ್ ಇನ್ ಸೆಲ್ ನಂ.7 ಚಿತ್ರದ ರಿಮೇಕ್ ಅಲ್ಲ. ಆದರೆ, ನಾಲ್ಕು ಚಿತ್ರದ ಮೂಲಕ ಪ್ರೇರಣ ಪಡೆದುಕೊಂಡು ಚಿತ್ರವನ್ನು ನಿರ್ಮಿಸಲಾಗಿದೆ. ಸಿನಿಮಾದ ಪರಿಕಲ್ಪನೆ ವಿಮಾನವಾಗಿದ್ದು, ಲೈಫ್ ಇಸ್ ಬ್ಯೂಟಿಫುಲ್, ಐ ಅ್ಯಮ್ ಸ್ಯಾಮ್, ಮಿರಾಕಲ್ ಇನ್ ಸೆಲ್ ನಂ.7 ಮತ್ತು ಪರ್ಸ್ಯೂಟ್ ಆಪ್ ಹ್ಯಾಪಿನೆಸ್ ಎಂಬ ನಾಲ್ಕು ಚಿತ್ರಗಳ ಮೂಲಕ ನಾನು ಪ್ರೇರಣೆಯನ್ನು ಪಡೆದುಕೊಂಡಿದ್ದೆ. ಸಿನಿಮಾ ಆರಂಭವಾಗುತ್ತಿದ್ದಂತೆಯೇ ಈ ನಾಲ್ಕು ಚಿತ್ರಗಳ ನಿರ್ದೇಶಕರಿಗೆ ಕೃಪೆಗಳನ್ನು ಸಲ್ಲಿಸಿದ್ದೆವು. ಟೈಟಲ್ ನಲ್ಲಿಯೂ ನಿರ್ದೇಶಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದೇವೆಂದು ಹೇಳಿದ್ದಾರೆ. 
2004ರಲ್ಲಿ ಸ್ಥಾಪನೆಯಾದ ಕ್ರೋಸ್ ಪಿಕ್ಚರ್ಸ್ ಒಂದು ಗಡಿಯಾಚೆಗಿನ ಸಿನಿಮಾ ಹಾಗೂ ಟೆಲಿವಿಷನ್ ಪ್ರೊಡೆಕ್ಷನ್ ಸಂಸ್ಥೆಯಾಗಿದೆ. ಸಿಯೋಲ್, ಲಾಸ್ ಏಂಜಲೀಸ್ ಹಾಗೂ ಮುಂಬೈ ನಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com