ಗುರುದತ್ ನಿರ್ದೇಶನದ 'ನಾಗಾರ್ಜುನ'ದಲ್ಲಿ ಉಪ್ಪಿ ಕೌಟುಂಬಿಕ ವ್ಯಕ್ತಿ

ಒಂದೇ ರೀತಿಯ ಪಾತ್ರ ಅಥವಾ ಒಂದೇ ಪ್ರಕಾರದ ಸಿನೆಮಾಗಳಿಗೆ ಸೀಮಿತಗೊಳಿಸಿಕೊಳ್ಳುವ ಜಾಯಮಾನವಲ್ಲ ರಿಯಲ್ ಸ್ಟಾರ್ ಉಪೇಂದ್ರ ಅವರದ್ದು. ಈಗ 'ಉಪ್ಪಿ-ರುಪೀ'ನಲ್ಲಿ ಋಣಾತ್ಮಕ
ರಿಯಲ್ ಸ್ಟಾರ್ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ
ಬೆಂಗಳೂರು: ಒಂದೇ ರೀತಿಯ ಪಾತ್ರ ಅಥವಾ ಒಂದೇ ಪ್ರಕಾರದ ಸಿನೆಮಾಗಳಿಗೆ ಸೀಮಿತಗೊಳಿಸಿಕೊಳ್ಳುವ ಜಾಯಮಾನವಲ್ಲ ರಿಯಲ್ ಸ್ಟಾರ್ ಉಪೇಂದ್ರ ಅವರದ್ದು. ಈಗ 'ಉಪ್ಪಿ-ರುಪೀ'ನಲ್ಲಿ ಋಣಾತ್ಮಕ ಹೀರೊ ಪಾತ್ರವನ್ನು ನಿರ್ವಹಿಸಿರುವ ಉಪ್ಪಿ ಮುಂದಿನ ಸಿನೆಮಾದಲ್ಲಿ ಅದಕ್ಕೆ ಸಂಪೂರ್ಣ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುರುದತ್ ನಿರ್ದೇಶನದ 'ನಾಗಾರ್ಜುನ' ಸಿನೆಮಾದಲ್ಲಿ ಉಪೇಂದ್ರ ನಟಿಸುವುದು ನಿಶ್ಚಿತವಾಗಿದ್ದು, ಅದರಲ್ಲಿ ಕೌಟುಂಬಿಕ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 
ಗುರುದತ್ ನಿರ್ದೇಶನದಲ್ಲಿ ಉಪೇಂದ್ರ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು, ಸಿನೆಮಾದ ಮುಹೂರ್ತ ಏಪ್ರಿಲ್ ೩ ರಂದು ನಡೆಯಲಿದೆ ಮತ್ತು ಏಪ್ರಿಲ್ ೧೩ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇವೆರಡು ಮೈಸೂರಿನಲ್ಲಿ ಜರುಗಲಿವೆ. 
ನಿರ್ದೇಶಕರು ತಿಳಿಸುವಂತೆ ಶೀರ್ಷಿಕೆ ಪಾತ್ರ ನಾಗಾರ್ಜುನನನ್ನು ಪೋಷಿಸುತ್ತಿರುವ ಉಪೇಂದ್ರ ಕೌಟುಂಬಿಕ ಡ್ರಾಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ಉಪೇಂದ್ರ ವಿಭಿನ್ನವಾಗಿ ಕಾಣಿಸಿಕೊಂಡ 'ಗೌರಮ್ಮ', 'ಕುಟುಂಬ'ದಂತಹ ಚಿತ್ರಗಳಿಗಾಗಿ ಪ್ರೇಕ್ಷಕರು ಹವಣಿಸುತ್ತಿದ್ದಾರೆ. ಉಪೇಂದ್ರ ಮುಂದೆ ಏನು ಮಾಡಲಿದ್ದಾರೆ ಎಂದು ಎಲ್ಲರು ಊಹಿಸುತ್ತಿದ್ದಾಗ ವಿದ್ಯಾಧರನ್ ಬರೆದ ಈ ಕಥೆ ಎಲ್ಲರಿಗು ಒಪ್ಪಿಗೆಯಾಯಿತು. ಇದು ನಗರದಲ್ಲಿ ನಡೆಯುವ ಕಥೆ ಮತ್ತು ಮಧ್ಯಮ ವರ್ಗದ ಜನರ ಜವಾಬ್ದಾರಿಗಳ ಸುತ್ತ ಸುತ್ತುತ್ತದೆ. ಎಲ್ಲವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಹೇಳಲಿದ್ದೇವೆ" ಎನ್ನುತ್ತಾರೆ ನಿರ್ದೇಶಕ. 
ಇದೆ ಮೊದಲ ಬಾರಿಗೆ ನಟಿ ಮೇಘನಾ ರಾಜ್ ಉಪೇಂದ್ರ ಎದುರು ನಟಿಸುತ್ತಿದ್ದಾರೆ. ಉಳಿದ ತಾರಾಗಣ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ತಿಳಿಸುವ ಗುರುದತ್ "ನಾನು 'ಸೈಕೋ' ಮೂಲಕ ನನ್ನ ವೃತ್ತಿಜೀವನ ಪ್ರಾರಂಭಿಸಿದೆ. ನಂತರ ನನ್ನ ಎರಡನೇ ಸಿನೆಮಾ 'ಖೈದಿ' ನನಗೆ ಹೆಚ್ಚು ಆತ್ಮವಿಶ್ವಾಸ ಮೂಡಿಸಿತು. ಈಗ ಉಪೇಂದ್ರ ಅವರೊಂದಿಗೆ ಕೆಲಸ ಮಾಡುತ್ತಿರುವುದು ಕನಸು ನನಸಾದಂತೆ. ನಾನು ಹೆಚ್ಚು ಜವಾಬ್ದಾರಿಗಳನ್ನು ಹೊರುವಂತೆ ಕೂಡ ಇದು ಮಾಡಿದೆ" ಎನ್ನುತ್ತಾರೆ. 
ಕಿರಣ್ ಶಂಕರ್ ಸಂಗೀತ ನೀಡಲಿದ್ದು, ಮನೋಹರ್ ಜೋಶಿ ಛಾಯಾಗ್ರಹಣ ಮಾಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com