ನೀರ್ ದೋಸೆಗೆ ಸಿಗದ ಪ್ರಶಸ್ತಿ : ಐಫಾ ಒಂದು ಡಿಗಿಲ್ ಅವಾರ್ಡ್ ಸಂಸ್ಥೆ, ಟ್ವಿಟ್ಟರ್ ನಲ್ಲಿ ಜಗ್ಗೇಶ್ ಕಿಡಿ

ಇತ್ತೀಚೆಗಷ್ಟೇ ನೀಡಲಾದ ಐಫಾ (ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್) ಕುರಿತು ಹಿರಿಯ ನಟ ಜಗ್ಗೇಶ್ ಕಿಡಿ ಕಾರಿದ್ದಾರೆ. 'ನೀರ್ ದೋಸೆ' ...
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ಇತ್ತೀಚೆಗಷ್ಟೇ ನೀಡಲಾದ ಐಫಾ (ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್) ಕುರಿತು ಹಿರಿಯ ನಟ ಜಗ್ಗೇಶ್ ಕಿಡಿ ಕಾರಿದ್ದಾರೆ. 'ನೀರ್ ದೋಸೆ' ಚಿತ್ರಕ್ಕೆ ಪ್ರಶಸ್ತಿ ಬರದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು,ಯಾರಿಗೆ ಬೇಕಾದರೂ ಅವಾರ್ಡ್ ಫಿಕ್ಸ್ ಎಂದು ಟೀಕಿಸಿದ್ದಾರೆ.

ಐಫಾ ಅವಾರ್ಡ್ಸ್ ಎನ್ನುವುದು ಇತ್ತೀಚಿನ ಒಂದು ಡಿಗಿಲ್ ಅವಾರ್ಡ್ ಸಂಸ್ಥೆ. ಯಾರಿಗೆ ಬೇಕಾದರೂ ಅವಾರ್ಡ್ ಫಿಕ್ಸ್. `ನೀರ್ ದೋಸೆ' ಜನ ಮೆಚ್ಚಿದ ಚಿತ್ರ. ಅದನ್ನು ಬೇಕಂತಲೇ ಮರೆಯಲಾಗಿದೆ. ನಮಗೆ ಜನಬೆಂಬಲವೇ ಪ್ರಶಸ್ತಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com