ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಗೆ ಮೆಚ್ಚುಗೆಯಾದ 'ಟಗರು'

ಎರಡು ವಾರಗಳ ಹಿಂದೆ ಬಿಡುಗಡೆಯಾಗಿದ್ದ 'ಟಗರು' ಸಿನೆಮಾದ ಮೇಕಿಂಗ್ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಈಗ ಪೊಲೀಸ್ ಅಧಿಕಾರಿ ಮತ್ತು ಎನಕೌಂಟರ್
ಟಗರು ಸಿನೆಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಭಾವನಾ
ಟಗರು ಸಿನೆಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಭಾವನಾ
Updated on
ಬೆಂಗಳೂರು: ಎರಡು ವಾರಗಳ ಹಿಂದೆ ಬಿಡುಗಡೆಯಾಗಿದ್ದ 'ಟಗರು' ಸಿನೆಮಾದ ಮೇಕಿಂಗ್ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಈಗ ಪೊಲೀಸ್ ಅಧಿಕಾರಿ ಮತ್ತು ಎನಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಆ ವಿಡಿಯೋಗೆ ಅಭಿಮಾನಿಯಾಗಿದ್ದಾರೆ. ಅಲ್ಲದೆ ಬಾಲಿವುಡ್ ನಿರ್ಮಾಪಕ ಮತ್ತು ವಿತರಕ ರಾಕೇಶ್ ಶೆಟ್ಟಿ ಅವರ ಗಮನವನ್ನು ಈ ವಿಡಿಯೋ ಸೆಳೆದಿದೆ. 
ಸೂರಿ ನಿರ್ದೇಶನದ ಈ ಸಿನೆಮಾಗೆ ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. 
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸೂರಿ "ನಮ್ಮ ಟೀಸರ್ ಅನ್ನು ಹಿರಿಯ ಪೊಲೀಸ್ ಅಧಿಕಾರಿ ದಯಾ ನಾಯಕ್ ಇಷ್ಟ ಪಟ್ಟಿದ್ದಾರೆ ಎಂದು ತಿಳಿದು ಸಂತಸವಾಯಿತು. ಎಲ್ಲ ಪ್ರಶಂಸೆಗೂ ಸ್ವಾಗತ ಆದರೆ ಅದು ನಮ್ಮ ಜವಾಬ್ದಾರಿಯುಯನ್ನು ಹೆಚ್ಚಿಸುತ್ತದೆ. ಎಲ್ಲರು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ" ಎನ್ನುತ್ತಾರೆ. 
ಟೀಸರ್ ಎಲ್ಲರ ಚಪ್ಪಾಳೆಗೆ ಕಾರಣವಾಗುತ್ತಿದ್ದರೆ, ಸಿನೆಮಾ ಸುತ್ತ ಹೆಣೆದಿರುವ ರ್ಯಾಪ್ ಹಾಡುಗಳನ್ನು ರಚಿಸಿ ಶಿವರಾಜ್ ಕುಮಾರ್ ಅಭಿಮಾನಿಗಳು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಶಿವರಾಜ್ ಕುಮಾರ್ ಅವರ ಬಗೆಗಿನ ಪ್ರೀತಿ, ಅಭಿಮಾನಕ್ಕೆ ಚಂದನ್ ಶೆಟ್ಟಿ ಮತ್ತು ವಿರಾಜ್ ಈ ರ್ಯಾಪ್ ವಿಡಿಯೋ ಮಾಡಿರುವ ಐವರಲ್ಲಿ ಇಬ್ಬರು. 
ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದ ಮುಂದಿನ ಹಂತ ಮೇ ೨೩ ರಿಂದ ಗೋವಾದಲ್ಲಿ ಪ್ರಾರಂಭವಾಗಲಿದ್ದು ನಟಿ ಬಾವನಾ ಕೂಡ ಸೆಟ್ ಸೇರಲಿದ್ದಾರೆ. ಮಾನ್ವಿತಾ ಹರೀಶ್ ಕೂಡ ಮುಖ್ಯ ಪಾತರದಲ್ಲಿ ನಟಿಸಿದ್ದು, ಧನಂಜಯ್ ಖಳನಾಯಕನಾಗಿ ನಟಿಸಿದ್ದಾರೆ. ವಶಿಷ್ಠ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com