ಕನ್ನಡಿಗರಿಗೆ ಭಾಷಾಭಿಮಾನವಿಲ್ಲ: ರಾಮ್ ಗೋಪಾಲ್ ವರ್ಮಾ ಅವಹೇಳನ

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಕನ್ನಡಿಗರ ಬಗ್ಗೆ ಕುಹಕದ ಮಾತುಗಳನ್ನಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ...
ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ನವದೆಹಲಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಕನ್ನಡಿಗರ ಬಗ್ಗೆ ಕುಹಕದ ಮಾತುಗಳನ್ನಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಕನ್ನಡ ಸಿನಿಮಾ ಅಭಿಮಾನಿಗಳ ಅಭಿಮಾನವನ್ನೇ ಪ್ರಶ್ನೆ ಮಾಡಿದ್ದಾರೆ. ವರ್ಮಾ ಅವರ ಹೇಳಿಕೆಗಳಿಗೆ ಸಾಕಷ್ಟು ವ್ಯಕ್ತವಾಗತೊಡಗಿವೆ. 
ಶ್ರೇಷ್ಠ ಹಿಂದಿ ಚಿತ್ರ, ಶೇಷ್ಟ್ರ ತಮಿಳು ಚಿತ್ರ, ಶ್ರೇಷ್ಠ ಕನ್ನಡ ಮತ್ತು ಶ್ರೇಷ್ಠ ಮಲಯಾಳಿ ಚಿತ್ರಗಳು ತೆಲುಗುವಿನಿಂದ ಡಬ್ ಆದ ಚಿತ್ರಗಳಾಗಿರುತ್ತವೆ ಎಂದು ವರ್ಮಾ ಟ್ವೀಟ್ ನಲ್ಲಿ ಹೇಳಿದ್ದಾರೆ.
ಬಾಹುಬಲಿ-2 ತೆಲುಗು ಚಿತ್ರವು ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳಿಗಿಂತ ಸೂಪರ್ ಹಿಟ್ ಆಗಿದೆ. ಇದರಿಂದಾಗಿ ಕನ್ನಡಿಗರಿಗೆ ತಮ್ಮ ಭಾಷೆಯ ಮೇಲೆ ಅಭಿಮಾನವೇ ಇಲ್ಲ ಎಂಬುದು ಸಾಬೀತಾಗುತ್ತಿದೆ. ಕನ್ನಡಿಗರು ಒಂದು ಕಡೆ ಡಬ್ಬಿಂಗ್ ಚಿತ್ರ ನಿಲ್ಲಿಸಲು ಯತ್ನಿಸುತ್ತಿದ್ದಾರೆ. ಆದರೆ, ಈ ಯತ್ನಗಳನ್ನು ತೆಲುಗು ಚಿತ್ರ ನುಚ್ಚುನೂರು ಮಾಡಿದೆ. 

ಬಾಹುಬಲಿ ಚಿತ್ರದ ಮೂಲಕ ಕನ್ನಡಿಗರು ಉತ್ತಮ ಚ್ರಿಗಳನ್ನು ಮಾತ್ರ ಬಯಸುತ್ತಾರೆಂದುಬು ಸ್ಪಷ್ಟವಾಗಿದೆ.
ಕನ್ನಡ ಚಿತ್ರಕ್ಕಿಂತ ತೆಲುಗು ಚಿತ್ರವನ್ನು ಹೆಚ್ಚು ನೋಡಿದ್ದಕ್ಕೆ ಹೆಮ್ಮೆಯ ಕನ್ನಡಿಗರು ತಮ್ಮದೇ ಆದ ಕನ್ನಡಿಗರ ವಿರುದ್ಧ ಹೋರಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com