ಉಪ್ಪಿ ತಮ್ಮ ಹುಟ್ಟುಹಬ್ಬವಾದ ಸೆಪ್ಟೆಂಬರ್ ೧೮ ರಂದು ಅವರೇ ನಿರ್ದೇಶಿಸುತ್ತಿರುವ ೫೦ ನೆಯ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಈ ಸಿನೆಮಾದ ಕಥೆ ಏನಿರಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚುತ್ತಿದ್ದರೂ, ನಟ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸ್ವಚ್ಛ ಭಾರತ ಅಭಿಯಾನ, ನೋಟು ಹಿಂಪಡೆತ ನಿರ್ಧಾರಗಳಿಂದ ಪ್ರಭಾವಿತರಾಗಿದ್ದು, ಅದರ ಸುತ್ತ ಕಥೆ ಸುತ್ತಲಿದೆಯೇ ಎಂಬ ಊಹಾಪೋಹಗಳು ಎದ್ದಿವೆ. ಆದರೆ ಬಲ್ಲ ಮೂಲಗಳು ತಿಳಿಸುವಂತೆ ರಾಜಕೀಯ ವಿಷಯವನ್ನು ಉಪ್ಪಿ ತೆಗೆದುಕೊಂಡಿಲ್ಲ ಬದಲಾಗಿ ಅವರು ಪರೀಕ್ಷಿಸಿ ಗೆದ್ದಿರುವ ಕಮರ್ಷಿಯಲ್ ಮನರಂಜನಾ ಶೈಲಿಯ ಸಿನೆಮಾ ಬರೆದಿದ್ದಾರೆ ಎನ್ನಲಾಗಿದೆ.