'ಕುರುಕ್ಷೇತ್ರ'ದಲ್ಲಿ ಶ್ರೀನಾಥ್ ಧೃತರಾಷ್ಟ್ರ, ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯ

ದರ್ಶನ್ ಅಭಿನಯದ ಮಹಾಭಾರತ - 'ಕುರುಕ್ಷೇತ್ರ'ಕ್ಕೆ ಇತ್ತೀಚಿನ ಸೇರ್ಪಡೆ ನಟ ಶ್ರೀನಾಥ್ ಮತ್ತು ಶ್ರೀನಿವಾಸ ಮೂರ್ತಿ. ನಾಗಣ್ಣ ನಿರ್ದೇಶನದ ಈ ಸಿನೆಮಾದಲ್ಲಿ ಶ್ರೀನಾಥ್ ಧೃತರಾಷ್ಟ್ರ ಮತ್ತು...
ದರ್ಶನ್
ದರ್ಶನ್
ಬೆಂಗಳೂರು: ದರ್ಶನ್ ಅಭಿನಯದ ಮಹಾಭಾರತ - 'ಕುರುಕ್ಷೇತ್ರ'ಕ್ಕೆ ಇತ್ತೀಚಿನ ಸೇರ್ಪಡೆ ನಟ ಶ್ರೀನಾಥ್ ಮತ್ತು ಶ್ರೀನಿವಾಸ ಮೂರ್ತಿ. ನಾಗಣ್ಣ ನಿರ್ದೇಶನದ ಈ ಸಿನೆಮಾದಲ್ಲಿ ಶ್ರೀನಾಥ್ ಧೃತರಾಷ್ಟ್ರ ಮತ್ತು ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಅಂದರೆ ದುರ್ಯೋಧನನಾಗಿ ನಟಿಸುತ್ತಿರುವ ದರ್ಶನ್ ಅವರ ತಂದೆಯ ಪಾತ್ರದಲ್ಲಿ ಶ್ರೀನಾಥ್ ನಟಿಸುತ್ತಿದ್ದು, ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಕಲಾ ನಿರ್ದೇಶಕ ಕಿರಣ್ ಸಾರಥ್ಯದಲ್ಲಿ ಈಗ ರಾಮೋಜಿ ಸ್ಟುಡಿಯೋಸ್ ನಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದೆ. ಹಾಗೆಯೇ ಅಂತಿಮ ತಾರಾಗಣದ ಆಯ್ಕೆಯನ್ನು ಸಂಪೂರ್ಣಗೊಳಿಸುವತ್ತ ನಿರ್ಮಾಪಕ-ನಿರ್ದೇಶಕ ಜೋಡಿ ಮುಂದುವರೆದಿದೆ. ರಾಣಾ ದಗ್ಗುಬಟ್ಟಿ ಅವರ ಹೆಸರು ಸ್ವಲ್ಪ ದಿನಗಳಿಂದ ಕೇಳಿ ಬರುತ್ತಿದ್ದರರೂ, ಈಗ ಬಾಲಿವುಡ್ ನಟ ವಿವೇಕ್ ಓಬಿರಾಯ್ ಅವರ ಹೆಸರು ಕೂಡ ಕೇಳಿ ಬರುತ್ತಿರುವುದು ವಿಶೇಷ. ಆದರೆ ಈ ನಟರಿಗೆ ಈ ಪುರಾಣ ಕಥೆಯ ಯಾವ ಪಾತ್ರ ಒಪ್ಪುತ್ತದೆ ಎಂಬುದು ನಿಶ್ಚಯವಾಗಿಲ್ಲ. 
ಈ ದೊಡ್ಡ ಬಜೆಟ್ ಚಿತ್ರವನ್ನು ಮುನಿರತ್ನ ನಿರ್ಮಿಸುತ್ತಿದ್ದು, ಜುಲೈ ೨೩ ಕ್ಕೆ ಚಾಲನೆ ಸಿಗಲಿದೆ. ಇದು ನಟ ದರ್ಶನ್ ಅವರ ೫೦ನೆಯ ಚಿತ್ರ. ಹಂಸಲೇಖ 'ಕುರುಕ್ಷೇತ್ರ'ಕ್ಕೆ ಸಂಗೀತ ನೀಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com