ನಿಖಿಲ್ ಕುಮಾರ್ ಮುನಿರತ್ನ ನಿರ್ಮಾಣದ ಪೌರಾಣಿಕ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಂತರ ನಿಖಿಲ್ ಹರ್ಷ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ನಿಖಿಲ್ ಗೆ ನಾಯಕಿಯಾಗಿ ನವನಟಿ ರಿಯಾ ನಲ್ವಾಡೆ ಅಭಿನಯಿಸುತ್ತಿದ್ದು ನಿಖಿಲ್ ತಂದೆಯಾಗಿ ಖ್ಯಾತ ನಟ ಶರತ್ ಕುಮಾರ್ ನಟಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.