ಬಾಹುಬಲಿ 2 ನಂತರ ಮತ್ತೆ ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕ್ತಾರಾ ಎಸ್ಎಸ್ ರಾಜಮೌಳಿ?

ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ್ದ ಬಾಹುಬಲಿ 2 ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಮತ್ತೆ ಮೆಗಾ ಪ್ರಾಜೆಕ್ಟ್ ಗೆ ಕೈ ಹಾಕುತ್ತಾರಾ?...
ರಾಮ್ ಚರಣ್ ತೇಜ-ಎಸ್ಎಸ್ ರಾಜಮೌಳಿ-ಜೂನಿಯರ್ ಎನ್‌ಟಿಆರ್‌
ರಾಮ್ ಚರಣ್ ತೇಜ-ಎಸ್ಎಸ್ ರಾಜಮೌಳಿ-ಜೂನಿಯರ್ ಎನ್‌ಟಿಆರ್‌
Updated on: 
ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ್ದ ಬಾಹುಬಲಿ 2 ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಮತ್ತೆ ಮೆಗಾ ಪ್ರಾಜೆಕ್ಟ್ ಗೆ ಕೈ ಹಾಕುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡತೊಡಗಿದೆ. 
ಇದಕ್ಕೆ ಕಾರಣವಾಗಿದ್ದು ಎಸ್ಎಸ್ ರಾಜಮೌಳಿ ಟಾಲಿವುಡ್ ನ ಸ್ಟಾರ್ ನಟರಾದ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜಾ ಅವರಿಗೆ ತೆಗೆಸಿಕೊಂಡಿರುವ ಫೋಟೋವನ್ನು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದ್ದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. 
ನಟರೊಂದಿಗೆ ಫೋಟೋವನ್ನು ಟ್ವೀಟ್ ಮಾಡಿರುವ ರಾಜಮೌಳಿ ಫೋಟೋ ಕೆಳಗೆ ಏನನ್ನೂ ಬರೆಯದೇ ಬರೀ ಚುಕ್ಕಿಗಳನ್ನಿಟ್ಟು ಸ್ಮೈಲೀ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com